ಕರಿಯಮ್ಮದೇವಿ ಜಾತ್ರೆ

ತಿಪಟೂರು : ತಾಲೂಕಿನ ಹೊನ್ನವಳ್ಳಿ ಹೋಬಳಿ ಮಣಕೀಕೆರೆ ಗ್ರಾಮದ ಕರಿಯಮ್ಮದೇವಿ, ಆಂಜನೇಯ ಸ್ವಾಮಿ ಮತ್ತು ಮಂಕಮ್ಮದೇವಿಯವರ ಜಾತ್ರಾ ಮಹೋತ್ಸವ ‘ಾನುವಾರ ಆರಂ‘ವಾಗಿದ್ದು, ಮದವಣಗಿತ್ತಿ ಉತ್ಸವ, ಅಮ್ಮನವರಿಗೆ ಪುಷ್ಪಾಲಂಕಾರ, ಮದ್ದಿನ ಸೇವೆ ನಡೆದಿದ್ದು, ಏ.7ರವರೆಗೆ ಅದ್ಧೂಯಾಗಿ ನಡೆಯಲಿದೆ. ಏ.3ರಂದು ಮೊದಲೋತ್ಸವ, ಏ.4ರಂದು ಆರತಿ ಬಾನ, ಶ್ರೀದೇವಿಯವರಿಗೆ ‘ೂಕೈಲಾಸ ಉತ್ಸವ, ದೀಪಾಲಂಕಾರ, ಹೂವಿನ ಅಲಂಕಾರ ಏ.5ರಂದು ಗಂಗಾಸ್ನಾನ, ಪಾರ್ಥಸಾರಥಿ ಅಲಂಕಾರದ ಉತ್ಸವ, ವೈಕುಂಠ ದರ್ಬಾರ್, ಪುಷ್ಪಾಲಂಕಾರ, ಕೀಲುಕುದುರೆ ನರ್ತನ, ಸಂಗೀತ ರಸಸಂಜೆ ಕಾರ್ಯಕ್ರಮ ಅಂದು ರಾತ್ರಿ ಅಮೋಘ ಬಾಣ ಬಿರುಸು ಮದ್ದಿನ ಪ್ರದರ್ಶನ, ತಮಟೆ ವಾದ್ಯ, ಮಹಿಳಾ ಡೊಳ್ಳು ಕುಣಿತ, ನಾಸಿಕ್ ಡೋಲ್, ನಗಾರಿ ವಾದ್ಯ, ಏ.6ರಂದು ಅಮ್ಮನವರ ರಥೋತ್ಸವ ಮತ್ತು ಉಯ್ಯಾಲೋತ್ಸವ, ಏ.7ರಂದು ಸಿಡಿ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಮಹಾಮಂಗಳಾರತಿ ನಡೆಯಲಿದೆ.

The Daily News Media

The Daily News Media