ದೇಶ ಸೇವೆಗೆ ಸನ್ನದ್ಧರಾದ ಅಗ್ನಿವೀರರು

ದಿ ಡೈಲಿ ನ್ಯೂಸ್ ಬೆಳಗಾವಿ
ಏರ ಮನ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಅಗ್ನಿವೀರರನ್ನು ಅದ್ಧೂರಿಯಾಗಿ ಬಿಳ್ಕೊಡಲಾಯಿತು. ಅಗ್ನಿಪಥ್ ಯೋಜನೆಯಡಿ ದೇಶದಲ್ಲೆ ತರಬೇತಿ ಪೂರ್ಣಗೊಳಿಸಿದ ಮೊದಲ ಅಗ್ನವೀರರು ಎಂಬ ಖ್ಯಾತಿಗೆ ಈ ಪ್ರಶಿಕ್ಷಣಾರ್ಥಿಗಳು ಪಾತ್ರರಾಗಿದ್ದಾರೆ. ಬೆಳಗಾವಿಯ ಸಾಂಬ್ರಾ ಏರ್‌ಮನ್ ತರಬೇತಿ ಶಾಲೆಯಲ್ಲಿ 22 ವಾರಗಳ ಕಾಲ ತರಬೇತಿ ಪಡೆದ 2675 ಅಗ್ನಿವೀರರಿಗೆ ಬೀಳ್ಕೊಟ್ಟ ಕಾರ್ಯಕ್ರಮ ನಡೆಯಿತು.
ತರಬೇತಿ ಅವಧಿಯಲ್ಲಿ ತಾವು ಪಡೆದ ವಿವಿ‘ ಕೌಶಲ್ಯಗಳನ್ನು ಅಗ್ನಿವೀರರು ಪ್ರದರ್ಶಿಸಿ, ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಅಗ್ನಿ ಅವಘಡ ವೇಳೆ ರಕ್ಷಣಾ ಕಾರ್ಯಾಚರಣೆ, ತ್ವರಿತ ಟೆಂಟ್ ನಿರ್ಮಾಣ, ತುರ್ತಾಗಿ ಬಂದೂಕು ಶಸ್ತ್ರಾಸ್ತ್ರಗಳ ಜೋಡಣೆ, ವಿವಿ‘ ಶಸ್ತ್ರಾಸ್ತ್ರಗಳ ಬಳಕೆ, ತುರ್ತು ಕಾರ್ಯಾಚರಣೆ ಶೈಲಿ, ಎದುರಾಳಿಗಳ ಕೈಗೆ ಸಿಕ್ಕಿಬಿದ್ದಾಗ ಅವರನ್ನು ಸದೆಬಡಿದು ಪಾರಾಗುವುದು ಸೇರಿ ಕಠಿಣ ಸಂದ‘ರ್ಗಳನ್ನು ನಿ‘ಾಯಿಸುವ ಬಗ್ಗೆ ಅಗ್ನಿವೀರರು ನಡೆಸಿದ ಅಣಕು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
2022ರ ಡಿ.30ರಂದು ಪ್ರಾರಂ‘ವಾದ ತರಬೇತಿಯಲ್ಲಿ 22 ವಾರಗಳ ಕಠಿಣ ತರಬೇತಿ ಪಡೆದರು. ಈ ವೇಳೆ ಕುಟುಂಬಸ್ಥರು ಕೂಡ ಕಾರ್ಯಕ್ರಮದಲ್ಲಿ ‘ಾಗಿಯಾಗಿ ತಮ್ಮ ಮಕ್ಕಳ ಕೌಶಲ್ಯ, ಸಾಹಸ ಪ್ರದರ್ಶನ ಕಣ್ತುಂಬಿಕೊಂಡು ಪುಳಕಿತರಾದರು. ಬಳಿಕ ನಡೆದ ಆಕರ್ಷಕ ಪಥಸಂಚಲನದಲ್ಲಿ ನಾಲ್ಕೂವರೇ ಕೆಜಿ ತೂಕದ ಬಂದೂಕುಗಳನ್ನು ಲೀಲಾಜಾಲವಾಗಿ ಕೈಯಲ್ಲಿ ಗಿರಕಿ ಹೊಡೆಸಿದ ಅಗ್ನಿವೀರರು ತಮ್ಮ ತೋಳ್ಬಲದ ಮೂಲಕ ಕೈ ಚಳಕ ಪ್ರದರ್ಶಿಸಿದರು.

The Daily News Media

The Daily News Media