ಖಾತೆ ದೊಡ್ಡದಲ್ಲ ಸಚಿವಸ್ಥಾನ ದೊಡ್ಡದು

ದಿ ಡೈಲಿ ನ್ಯೂಸ್ ಕಲಬುರಗಿ
ಯಾದಗಿರಿ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ‘ಾಗದ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಣ್ಣ ಕೈಗಾರಿಕೆ ಹಾಗೂ ಉದ್ದಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ‘ರವಸೆ ನೀಡಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸ‘ಾಂಗಣದಲ್ಲಿ ಸಚಿವರಾದ ನಂತರ ಕಲಬುರಗಿ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ‘ಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂ‘ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಖಾತೆ ದೊಡ್ಡದಲ್ಲ.ಸಚಿವ ಸ್ಥಾನ ದೊಡ್ಡದು ಎಂದರು.
ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳು ಈ ಹಿಂದೆ ಸಂಯುಕ್ತವಾಗಿದ್ದವು. ಆಡಳಿತಾತ್ಮಕ ದೃಷ್ಟಿಯಿಂದ ಬೇರೆ ಬೇರೆ ಜಿಲ್ಲೆಯಾಗಿವೆ. ಹೀಗಾಗಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳನ್ನು ಸಮನಾಗಿ ಪರಿಗಣಿಸಲಾಗುವುದು ಎಂದು ಹೇಳಿದರು. ಶಾಸಕ ಎಂ.ವೈ.ಪಾಟೀಲ, ಅಲ್ಲಮಪ್ರ‘ು ಪಾಟೀಲ ಮಾತನಾಡಿ, ಈ ‘ಾಗದ ಅಭಿವೃದ್ಧಿಗೆ ದರ್ಶನಾಪುರ ಅವರಿಗೆ ಸದಾ ಬೆಂಬಲ ಹಾಗೂ ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಸಿದರು. ಪಕ್ಷದ ಜಿಲ್ಲಾ‘್ಯಕ್ಷ ಜಗದೇವ ಗುತ್ತೇದಾರ, ಶಿವಾನಂದ ಹೊನಗುಂಟಿ, ಮಹಾಂತಪ್ಪ ಸಂಗಾವಿ, ಸು‘ಾಷ್ ರಾಠೋಡ್, ಶಿವಾನಂದ ಪಾಟೀಲ ಮರತೂರ, ಲಾಲ್ ಅಹ್ಮದ್ ಸೇಠ್, ಭೀಮರೆಡ್ಡಿ ಪಾಟೀಲ ಕುರಕುಂದಾ, ಆಲಂಖಾನ್, ಲಿಂಗರಾಜ ತಾರ್ ೈಲ್, ಸಿ.ಎ. ಪಾಟೀಲ, ಈರಣ್ಣ ಝಳಕಿ, ಲತಾ ರಾಠೋಡ್, ಮಲ್ಲಿಕಾರ್ಜುನ ಪೂಜಾರಿ, ಚೇತನ ಗೋನಾಯಕ, ದೇವಿಂದ್ರಪ್ಪ ಮರತೂರ ಮತ್ತಿತರರಿದ್ದರು.

 

The Daily News Media

The Daily News Media