ಬಂದಾ ನವಾಜ್ ಉರುಸ್ ಇಂದಿನಿಂದ

ಕಲಬುರಗಿ: ದಕ್ಕನ್ ‘ಾಗದ ಸೂಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ಗೇಸೂದರಾಜ್ ಅವರ 619ನೇ ಉರುಸ್ ಶರ್‌ೀ ಜೂ.5, 6 ಹಾಗೂ 7ರವರೆಗೆ ಜರುಗಲಿದೆ ಎಂದು ದರ್ಗಾದ ಪೀಠಾಧಿಪತಿಗಳಾದ ಸೈಯದ್ ಶಾ ಖೂಸ್ರೊ ಹುಸೇನಿ ಅವರು ತಿಳಿಸಿದ್ದಾರೆ. 5ರಂದು ಕಲಬುರಗಿ ನಗರದ ಮಹೆಬೂಬ್ ಗುಲಶನ್ ಗಾರ್ಡನದಿಂದ ಗಂ‘ದ ಮೆರವಣಿಗೆ ಸೂಪರ್ ಮಾರ್ಕೆಟ್ ಮಾರ್ಗವಾಗಿ ಖಾಜಾ ಬಂದಾ ನವಾಜ್ ದರ್ಗಾಕ್ಕೆ ತೆರಳಲಿದೆ, ಮಂಗಳವಾರ 6 ರಂದು ದೀಪೋತ್ಸವ ಕಾರ್ಯಕ್ರಮ, 7 ರಂದು ಜಿಯಾರತ್ (ದರ್ಶನ) ಸೇರಿದಂತೆ ಖವಾಲಿಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದರಂತೆ ಪ್ರತಿ ವಷರ್ದಂತೆ ಅಖಿಲ ‘ಾರತ ಕೈಗಾರಿಕಾ ಪ್ರದರ್ಶನ ಮೇಳದ ಉದ್ಘಾಟನೆಯನ್ನು ಜೂ.4ರ ಸಾಯಂಕಾಲ 7.30 ಗಂಟೆಗೆ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ನಡೆಸಿಕೊಡಲಿದ್ದು, ಉರುಸ್‌ನಲ್ಲಿ ಈ ಬಾರಿ ಅತಿಹೆಚ್ಚಿನ ‘ಕ್ತಾದಿಗಳು ಬರುವಿಕೆ ನಿರೀಕ್ಷೆಯಿದೆ.

The Daily News Media

The Daily News Media