ಛತ್ರಪತಿ ಶಿವಾಜಿ ‘ೈರ್ಯಶಾಲಿ ಸಾಮ್ರಾಟ

ದಿ ಡೈಲಿ ನ್ಯೂಸ್ ಚಾಮರಾಜನಗರ
ಛತ್ರಪತಿ ಶಿವಾಜಿಯು ಅತ್ಯಂತ ‘ೈರ್ಯಶಾಲಿ ಸಾಮ್ರಾಟನಾಗಿದ್ದು, ‘ಾರತದಾದ್ಯಂತ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ, ವಿಸ್ತರಿಸಿದ ಕೀರ್ತಿ ಇವರದ್ದು. ಶಿವಾಜಿ ಅವರು ತಮ್ಮ ಜೀವಿತಾವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದರು ಎಂದು ಆರೆಸ್ಸೆಸ್ ಕಾರ್ಯಕರ್ತ ಹೇಮಂತ್ ತಿಳಿಸಿದರು.
ನಗರದ ಶಿವಾಜಿ, ನೇತಾಜಿ ಸೇನೆ ಹಳೆಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶಿವಾಜಿ ಜಯಂತಿ ಹಾಗೂ ಸು‘ಾಷ್ ಚಂದ್ರ ಬೋಸ್ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂ ‘ರ್ಮಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಅಪಾರ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದ ಶಕ್ತಿ. ಈ ಶಿವಾಜಿ ಮಹಾರಾಜರು 1627ರ ೆ.19ರಂದು ಶಿವನೇರಿಯಲ್ಲಿ ಮರಾಠ ಕುಟುಂಬದಲ್ಲಿ ಜನಿಸಿದರು. ಅವರು ‘ಾರತದ ವೀರ ಪುತ್ರರಲ್ಲಿ ಒಬ್ಬರು. ಅನೇಕ ಜನರು ಅವರನ್ನು ಹಿಂದೂ ಹೃದಯ ಸಾಮ್ರಾಟಎಂದು ಕರೆಯುತ್ತಾರೆ, ಕೆಲವರು ಅವರನ್ನು ’ಮರಾಠ ಹೆಮ್ಮೆ’ ಎಂದು ಕರೆಯುತ್ತಾರೆ, ಆದರೆ ಅವರು ‘ಾರತ ಗಣರಾಜ್ಯದ ಮಹಾನ್ ವೀರರಾಗಿದ್ದರು ಎಂದು ಹೇಳಿದರು.
ಮರಾಠ ಸಂಘದ ಅ‘್ಯಕ್ಷ ವೆಂಕಟರಾವ್‌ಸಾಠೆ ಅ‘್ಯಕ್ಷತೆ ವಹಿಸಿದ್ದರು. ಶಿವಾಜಿ ಪುತ್ಥಳಿಗೆ ಪುಷ್ಪಾರ್ಚನೆವ ಮಾಡಲಾಯಿತು. ಶಿವಾಜಿ, ನೇತಾಜಿ ಸೇನೆ ಅ‘್ಯಕ್ಷ ಸುಂದರ್‌ರಾಜ್, ನಗರಸ‘ಾ ಸದಸ್ಯ ಮಂಜುನಾಥ್ ಶಿವಾಜಿ ಮತ್ತು ಸು‘ಾಷ್ ಚಂದ್ರಬೋಸ್ ಸೇನೆಯ ಕಾರ್ಯಕರ್ತರು ಇದ್ದರು.

 

The Daily News Media

The Daily News Media