ಲಯನ್ಸ್‌ ಜನಪರ ಕಾರ್ಯಕ್ರಮ

ದಿ ಡೈಲಿ ನ್ಯೂಸ್ ಚಾಮರಾಜನಗರ
ಲಯನ್ಸ್‌ ಸಂಸ್ಥೆಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಲಯನ್ಸ್‌ ಸಂಸ್ಥೆ ಅ‘್ಯಕ್ಷ ಪ್ರಕಾಶ್ ಜೈನ್ ತಿಳಿಸಿದರು.
ಲಯನ್ಸ್‌ ಸಂಸ್ಥೆ, ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಹಾಗು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬರ ಉದ್ಘಾಟಿಸಿ ಅವರು ಮಾತನಾಡಿ, ಲಯನ್ಸ್‌ ಸಂಸ್ಥೆಯು ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ವಿವಿ‘ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹಲವಾರು ಉಚಿತ ಶಿಬಿರಗಳನ್ನು ಮಾಡುತ್ತಾ ಬಂದಿದೆ. ಅಲ್ಲದೆ ಶಾಲೆಗಳಿಗೆ ‘ೇಟಿನೀಡಿ ಕಂಪ್ಯೂಟರ್, ಪ್ರಿಂಟರ್, ಸಮವಸ್ತ್ರ ವಿತರಣೆ ಅಲ್ಲದೆ ಆಶ್ರಮಗಳಿಗೆ ತೆರಳಿ ಅವರಿಗೆ ಬಟ್ಟೆ ವಿತರಿಸುವುದು, ಇನ್ನು ಅನೇಕ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಂತೇಮರಹಳ್ಳಿಯಲ್ಲಿಯಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ 105ಜನರನ್ನು ತಪಾಸಣೆ ಮಾಡಿ ಅದರಲ್ಲಿ 51ಮಂದಿಯನ್ನು ಕೊಯಮತ್ತೂರಿನ ಅರವಿಂದ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತು. ಕಾರ್ಯದರ್ಶಿ ಹೊಸೂರು ಜಗದೀಶ್, ಲೋಕೇಶ್ ಜೈನ್, ಬಿ.ಎಂ.ಪ್ರ‘ುಸ್ವಾಮಿ, ವೃಷಬೇಂದ್ರಪ್ಪ, ಚೇತನ್, ರಂಗಸ್ವಾಮಿ, ಪವನ್ ಕುಮಾರ್ ಜೈನ್, ಅರವಿಂದ ಆಸ್ಪತ್ರೆಯ ವಿಜಯ್ ಹಾಗೂ ಸಿಬ್ಬಂದಿ ಇದ್ದರು.

 

The Daily News Media

The Daily News Media