ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ

ದಿ ಡೈಲಿ ನ್ಯೂಸ್ ಸಿಂದಗಿ
ರಾಜ್ಯ ಸರ್ಕಾರಿ ನೌಕರರ ವೇತನ ‘ತ್ಯಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಸಲುವಾಗಿ ಮಾ.1ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕಾ‘್ಯಕ್ಷ ಅಶೋಕ ತೆಲ್ಲೂರ ಹೇಳಿದರು. ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿ ಹೋರಾಟವನ್ನು ಯಶಸ್ವಿಗೊಳಿಸಲು ತಾಲೂಕಿನ ಎಲ್ಲ ಸರ್ಕಾರಿ ನೌಕರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನವೇ 7ನೇ ವೇತನ ಆಯೋಗದಿಂದ ಮ‘್ಯಂತರ ವರದಿಯನ್ನು ಪಡೆದುಕೊಂಡು ಶೇ.40ರಷ್ಟು ಫಿಟ್ ಮೆಂಟ್ ಸೌಲ‘್ಯವು ಜುಲೈ 1, 2022 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿಬೇಕು. ಎನ್‌ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ಒಳಪಡಿಸಬೇಕು. ಪಂಜಾಬ್, ಛತ್ತಿಸಗಡ, ಜಾರ್ಖಂಡ್ ಪಂಜಾಬ್ ಹಿಮಾಚಲ ಪ್ರದೇಶ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಅದರಂತೆ ಕರ್ನಾಟಕದಲ್ಲಿಯೂ ಜಾರಿಗೆ ತರಬೇಕು ಎನ್ನುವ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ಜೊತೆಗೆ ಸಂಘದ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರ‘ಾನ ಕಾರ್ಯದರ್ಶಿ ಗಿರಿ‘ರ ಗತಾಟೆ, ಎಸ್.ಎಮ್. ಚಿಗರಿ, ಗಂಗಾ‘ರ ಸೋಮನಾಯಕ, ಶಿವರಾಜ ಚೌ‘ರಿ, ಎ್.ಬಿ. ಅರಳಿಮಟ್ಟಿ, ಎಸ್.ಎಮ್.ಮಸಳಿ ಮತ್ತಿತರರು ಇದ್ದರು.

 

The Daily News Media

The Daily News Media