ಒಳ್ಳೇ ದಿನ ಬರ್ಲೇ ಇಲ್ವಲ್ರೀ ಮೋದಿ..

ಜಮಖಂಡಿಯಲ್ಲಿ ಪ್ರಜಾ‘್ವನಿ ಸಮಾವೇಶದಲ್ಲಿ ಪ್ರ‘ಾನಿಯನ್ನು ಕಿಚಾಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ದಿ ಡೈಲಿ ನ್ಯೂಸ್ ಜಮಖಂಡಿ
ಪ್ರ‘ಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಲ್ಲಿ ಈ ದೇಶದಲ್ಲಿ ಅಚ್ಛೇ ದಿನ ಆಯೆಂಗೇ ಎಂದಿದ್ದರು. ಆದರೆ 9ವರ್ಷಗಳು ಕಳೆದರೂ ಮೋದಿ ಅವರೇ ಒಳ್ಳೆ ದಿನಗಳು ಬರಲೇ ಇಲ್ವರ್ರಿ.. ಬರೆ ಕೆಟ್ಟ ದಿನಗಳೇ ಬಂದ್ವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರ‘ಾನಿ ನರೇಂದ್ರ ಮೋದಿ ಅವರನ್ನು ಕಿಚಾಯಿಸಿದರು. ನಗರ ಸಮೀಪದ ಕಡಪಟ್ಟಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕಾಂಗ್ರೆಸ್‌ನ ಪ್ರಜಾ‘್ವನಿ ಸಮಾವೇಶ ಹಾಗೂ ಕೈಗೆ ಕೈಜೋಡಿಸಿ ಪಾದಯಾತ್ರೆಯ ಸಮಾರೋಪ ಸಮಾರಂ‘ದಲ್ಲಿ ಅವರು ಬಿಜೆಪಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ‘ಾಷಣದುದ್ದಕ್ಕೂ ಪ್ರ‘ಾನಿ ನರೇಂದ್ರ ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಪ್ರ‘ಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಾಕುತ್ತೆನೆ ಎಂದಿದ್ದರು, 15 ಲಕ್ಷ ಅಲ್ಲ, 15 ಪೈಸೆನೂ ಹಾಕಲಿಲ್ವರ್ರಿ ಎಂದು ಪ್ರಶ್ನಿಸಿದರು. ವರ್ಷಕ್ಕೆ 2ಕೋಟಿ ಉದ್ಯೋಗ ಎಂದಿದ್ದರು. 9 ವರ್ಷದಲ್ಲಿ 18ಕೋಟಿ ಉದ್ಯೋಗ ಕೊಟ್ಟಿದ್ದಿರಾ.? 2022ರ ವೇಳೆಗೆ ರೈತರ ಆದಾಯವನ್ನ ದ್ವಿಗುಣ ಮಾಡುತ್ತೆನೆ ಎಂದಿದ್ದರು ದ್ವಿಗುಣ ಆಯಿತಾ ರೈತರ ಸಾಲ ದುಪ್ಪುಟ್ಟು ಆಯಿತು ಅಷ್ಟೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಐದು ವಷರ್ದ ಹಿಂದೆ ನೆನಪು ಮಾಡಿಕೊಳ್ಳಿ, ಎಂ.ಬಿ.ಪಾಟೀಲ ನೀರಾವರಿ ಮಂತ್ರಿ ಇದ್ರು, ನಾನಾಗಲಿ, ಎಂ.ಬಿ.ಪಾಟೀಲ ಆಗಲಿ ಬಿಲ್ ಕೊಡಲು ಕಮಿಷನ್ ಪಡೆದಿಲ್ಲ, ಪಡೆದಿದ್ದೇವೆ ಅಂದರೆ ಈ ಕ್ಷಣ ರಾಜಕೀಯ ನಿವೃತ್ತಿ ಆಗ್ತೇವೆ, ನಾನು ಮಂತ್ರಿ, ಡಿಸಿಎಂ, ಸಿಎಂ ಆಗಿದ್ದೇನೆ. ಇಂತ ಕೆಟ್ಟ ಸರ್ಕಾರ ನೋಡಿಲ್ಲ, ನನಗೆ ವೈಯಕ್ತಿಕ ದ್ವೇಷ ಇಲ್ಲ, ಆದರೆ, ರೈತರು ಉಳಿಯಬೇಕಲ್ಲ, ಜನರು ಉಳಿಯಬೇಕಲ್ಲ ಎಂದರು.
ಕೋಮುವಾದಿ ಬಿಜೆಪಿ ಅಧಿಕಾರದಲ್ಲಿ ಇರಬಾರದೆಂದು ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ವಿ ಆ ಪುಣ್ಯಾತ್ಮ ಮಾತ್ರ ವೆಸ್ಟೆಂಡ್ ಹೋಟೆಲ್‌ನಲ್ಲೇ ಕಾಲ ಕಳೆದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಅವರು ವೆಸ್ಟೆಂಡ್ ಹೋಟೆಲ್‌ನಲ್ಲಿ ಕುಳಿತು ಕಾಲ ಕಳೆದರು. ಜನರನ್ನು ‘ೇಟಿ ಮಾಡಲಿಲ್ಲ, ಹೀಗಾಗಿ ಸರ್ಕಾರ ಕಳ್ಕೊಂಡೆವು. ಕೊಟ್ಟ ಕುದುರೆ ಏರದವ ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಕಿಡಿಕಾರಿದರು. ಶಾಸಕರು ಬೇಸರ ಆಗಿದ್ದರು. ಯಡಿಯೂರಪ್ಪ ದುಡ್ಡು ಹಿಡ್ಕೊಂಡು ಕಾಯುತ್ತಾ ಕುಳಿತ್ತಿದ್ದರು. 17 ಜನ ಶಾಸಕರನ್ನ ವ್ಯಾಪಾರ ಮಾಡಿ ಖರೀದಿ ಮಾಡಿದರು. ಅನ್ನ ಹಳಸಿತ್ತು, ನಾಯಿ ಕಾದಿತ್ತು ಅನ್ನೋ ಗಾದೆಯಂತಾಗಿದೆ. ಅದನ್ನೆ ಆಪರೇಶನ್ ಕಮಲ ಅಂತ ಕರೆದಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಜಮೀರ ಅಹ್ಮದ, ಆನಂದ ನ್ಯಾಮಗೌಡ, ಕೆಪಿಸಿಸಿ ಕಾರ್ಯಾ‘್ಯಕ್ಷ ಸತೀಶ ಜಾರಕಿಹೋಳಿ ಮಾತನಾಡಿದರು. ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಎಸ್.ಜಿ.ನಂಜಯ್ಯನಮಠ, ವಿಣಾ ಕಾಶಪ್ಪನವರ, ನಜೀರ ಕಂಗನೊಳ್ಳಿ, ಶ್ರೀಶೈಲ ದಳವಾಯಿ, ಪದ್ಮಜೀತ ನಾಡಗೌಡ, ದಾನೇಶ ಘಾಟಗೆ ಇತರರು ಇದ್ದರು.

ೆಟೋ))
ಲೀಡ್ ಜೆಕೆಡಿ 27-1

The Daily News Media

The Daily News Media