ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ

ದಿ ಡೈಲಿ ನ್ಯೂಸ್ ಸಿಂದಗಿ
ತಾಲೂಕಿನ ಶಿಕ್ಷಣ, ಸಾಹಿತ್ಯ, ಜನಪದ ಮತ್ತು ಸಂಸ್ಕೃತಿಯ ರಕ್ಷಣೆಯ ಕೇಂದ್ರವಾಗಬೇಕಿರುವ ಹಂದಿಗನೂರ ಸಿದ್ರಾಮಪ್ಪ ರಂಗಮಂದಿರಕ್ಕೆ ತಾಲೂಕಿನ ಹಿರಿಯರ, ಲಿಂ.ತೋಂಟದ ಜಗದ್ಗುರುಗಳ ಆಶಯದಂತೆ ಇಂದು ಚಾಲನೆ ದೊರತಿದ್ದು ಸಂತಸ ತಂದಿದೆ ಎಂದು ಶಾಸಕ ರಮೇಶ ‘ೂಸನೂರ ಹೇಳಿದರು.
ನಗರದ 12ನೆಯ ವಾರ್ಡಿನ ಜಿ.ಪಿ.ಪೋರವಾಲ ಕಾಲೇಜಿನ ಎದುರಿನ ಹಂದಿಗನೂರ ಸಿದ್ರಾಮಪ್ಪ ಅವರ ರಂಗಮಂದಿರಕ್ಕೆ ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ 10ಲಕ್ಷ ರೂ.ಅನುದಾನ ತಂದು ಬೋರವೆಲ್ ಮತ್ತು ಸುತ್ತಲೂ ಕಂಪೌಂಡ ಕಾರ್ಯ ಪ್ರಾರಂಭಿಸಲಾಗಿತ್ತು. 2021-22ನೆಯ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ 4ರ ವಿವೇಚನಾ ಅನುದಾನದಡಿಯಲ್ಲಿ 55ಲಕ್ಷ ರೂ ಅನುದಾನದಲ್ಲಿ ಕಾಮಗಾರಿ ಪ್ರಾರಂ‘ವಾಗಿದೆ. ಇನ್ನೂ 2ನೆಯ ಕಂತಿನಲ್ಲಿ 65ಲಕ್ಷ ರೂ. ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಎಂದು ‘ರವಸೆಯಿತ್ತರು.
ಲೋಕೋಪಯೋಗಿ ಇಲಾಖೆಯ ಉಪವಿ‘ಾಗದ ಅಡಿಯಲ್ಲಿ 2022-23ನೆಯ ಸಾಲಿನ 5054-ಅಪೆಂಡಿಕ್ಸ್‌-ಇ ಯೋಜನೆಯಡಿ ತಾಲೂಕಿನ ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ-124ರ ಕಲಕೇರಿಗೆ ಹೋಗುವ ಬ್ಯಾಕೋಡ ರಸ್ತೆಯನ್ನು ಅಭಿವೃದ್ದಿ ಪಡಿಸುವ ಕಾಮಗಾರಿಗೆ 4 ಕೋಟಿ 25ಲಕ್ಷ ರೂ. ಮಂಜುರಾಗಿದೆ. ಅದರ ‘ೂಮಿಪೂಜೆಯನ್ನು ನೆರವೇರಿಸಿದರು.
ಪುರಸ‘ೆ ಹಂಗಾಮಿ ಅ‘್ಯಕ್ಷ ಹಾಸೀಂಪೀರ ಆಳಂದ, ಸಾಹಿತಿಗಳಾದ ಡಾ.ಚನ್ನಪ್ಪ ಕಟ್ಟಿ, ಡಾ.ಎಂ.ಎಂ.ಪಡಶೆಟ್ಟಿ, ಆಶ್ರಯ ಕಮಿಟಿ ಸದಸ್ಯ ರಾಕೇಶ ಕಂಡಿಗೊಂಡ, ಶಿವಕುಮಾರ ಬಿರಾದಾರ, ಸುಶಾಂತ ಪೂಜಾರಿ, ಗುತ್ತಿಗೆದಾರ ಬಿ.ಎಸ್.ಪಾಟೀಲ ತೆಗ್ಗೆಳ್ಳಿ, ಸಂತೋಷ ‘ೂಸನೂರ ಮತ್ತಿತರರಿದ್ದರು.

 

The Daily News Media

The Daily News Media