ದಾಸ್ಯ-ಆಕ್ರಮಣಕಾರರ ಇತಿಹಾಸ

ದಿ ಡೈಲಿ ನ್ಯೂಸ್ ಅಥಣಿ
ರಾಷ್ಟ್ರೀಯತೆಯ ಸಂಸ್ಕೃತಿಯನ್ನು ಬಿಂಬಿಸುವ ಇತಿಹಾಸ ಪರಿಚಯಿಸದೇ ದಾಸ್ಯದ ಹಾಗೂ ಆಕ್ರಮಣಕಾರರ ಇತಿಹಾಸವನ್ನೇ ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದು ದುರದೃಷ್ಟಕರ ಸಂಗತಿ ಎಂದು ಪ್ರಜ್ಞಾ ಪ್ರವಾಹದ ಅಖಿಲ ‘ಾರತ ಸಂಯೋಜಕ ನಂದಕುಮಾರ ಹೇಳಿದರು. ಅಥಣಿ ಉತ್ತಿಷ್ಠ ‘ಾರತ ಸಂಘಟನೆ ಸ್ಥಳೀಯ ಶಿವಣಗಿ ಸಾಂಸ್ಕೃತಿಕ ‘ವನದಲ್ಲಿ ‘ಸ್ವಾಧೀನತೆಯಿಂದ ಸ್ವಾತಂತ್ರ್ಯದ ಕಡೆಗೆ’ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕೀರಣಕ್ಕೆ ಚಾಲನೆ ನೀಡಿ ಮಾತನಾಡಿ, ಚೋಳರು ‘ಾರತವನ್ನು ಸುಮಾರು 2000 ವರ್ಷಗಳ ಕಾಲ ಆಳ್ವಿಕೆ ಮಾಡಿರುವುದಾಗಲಿ ಅಥವಾ ಅನೇಕ ಶತಮಾನಗಳ ಕಾಲ ಆಡಳಿತ ನಡೆಸಿದ್ದ ಹೊಯ್ಸಳ, ವಿಜಯ ನಗರ, ಪಾಂಡ್ಯರು ಸೇರಿದಂತೆ ಅನೇಕರ ಕುರಿತು ಹಾಗೂ ನಮ್ಮ ಶಿಲ್ಪ ಕಲೆ, ವಾಸ್ತು ಸೇರಿದಂತೆ ನಮ್ಮ ಸಂಸ್ಕೃತಿ ಬಿಂಬಿಸುವ ವಿಷಯಗಳ ಉಲ್ಲೇಖವನ್ನು ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಎಲ್ಲಿಯೂ ಇಲ್ಲ ಆದರೆ ನಮ್ಮ ಮೇಲೆ ಆಕ್ರಮಣ ಮಾಡಿ ಆಡಳಿತ ನಡೆಸಿದ ಮೊಘಲರ, ಬ್ರಿಟಿಷರ ಆಡಳಿತವನ್ನು ಇತಿಹಾಸದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ ಎಂದು ಹೇಳಿದರು.
ಲೇಖಕ ರೋಹಿತ ಚಕ್ರತೀರ್ಥ, ಆರೆಸ್ಸೆಸ್ ಅಖಂಡ ಕರ್ನಾಟಕದ ಪ್ರಚಾರ ಪ್ರಮುಖ ಅರುಣಕುಮಾರ, ಪ್ರಜ್ಞಾ ಪ್ರವಾಹದ ಅಖಿಲ ‘ಾರತ ಸಹ ಸಂಯೋಜಕ ರಘುನಂದನ, ಗದಗ ಕೆಎಲ್‌ಇ ಪ್ರಾ‘್ಯಾಪಕಿ ವೀಣಾ ಮಾತನಾಡಿದರು.

 

The Daily News Media

The Daily News Media