ಕಳಪೆ ಕಾಮಗಾರಿಗೆ ಮುರಿದು ಬಿದ್ದ ಕಾಲುವೆ

ನಾಲ್ಕು ತಿಂಗಳಾದರೂ ದುರಸ್ಥಿ ಕಾಣದ ಮುರಿದ ಕಾಲುವೆ; ಶಾಸಕರ ಸೂಚನೆ ಕಿಮ್ಮತ್ತು ನೀಡದ ಗುತ್ತಿಗೆದಾರ, ಅಽಕಾರಿಗಳು
-ಗೂಳಿಪುರ ನಂದೀಶ.ಎಂ. ಯಳಂದೂರು
ತಾಲೂಕಿನ ಗಣಿಗನೂರು ಗ್ರಾಮದಲ್ಲಿ ಕಳಪೆ ಕಾಮಗಾರಿಯ ಕಾರಣ ಕಾಲುವೆ ನಿರ್ಮಾಣ ಹಂತದಲ್ಲಿಯೇ ಮುರಿದ್ದು ಬಿದ್ದಿದ್ದು, ನಾಲ್ಕು ತಿಂಗಳು ಕಳೆದರೂ ಸಂಬಂ‘ಪಟ್ಟ ಇಲಾಖೆಯ ಅಽಕಾರಿಗಳು ಮತ್ತೆ ದುರಸ್ತಿಪಡಿಸುವ ಗೋಜಿಗೆ ಮುಂದಾಗಿಲ್ಲ. ಜತೆಗೆ ಸಂಬಂ‘ಪಟ್ಟ ಜೆಇ ಹಾಗೂ ಗುತ್ತಿಗೆದಾರನ ವಿರುದ್ದ ಯಾವುದೇ ಕ್ರಮವಹಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೊಳ್ಳೇಗಾಲ ‘ಗದ ಕಾವೇರಿ ನೀರಾವರಿ ಇಲಾಖೆ ವತಿಯಿಂದ ೫೦ ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ರೈತರ ಜಮೀನಿಗೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಿರುವ ಕಾಲುವೆಯ ಅಭಿವೃದ್ಧಿ ಕಾಮಗಾರಿ ಜೂನ್‌ನಿಂದಲೇ ಆರಂ‘ಗೊಂಡಿದ್ದು, ತರಾತುರಿಯಲ್ಲಿ ನಡೆದಿದೆ. ಆದರೆ, ಇಲ್ಲಿ ಕಾಮಗಾರಿ ಗುಣಮಟ್ಟಕ್ಕೆ ಆದ್ಯತೆ ನೀಡಿಲ್ಲ. ಕಾಲುವೆ ಆಗಸ್ಟ್‌ನಲ್ಲಿಯೇ ಕುಸಿದು ಬಿದ್ದಿದ್ದು, ಮಳೆಯ ಕಾರಣದಿಂದ ನಿರಂತರವಾಗಿ ಕಾಲುವೆ ನೀರು ರೈತರ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನುಗ್ಗಿ ಜಲಾವೃತಗೊಂಡಿದೆ. ಗುಣಮಟ್ಟದ ಕಬ್ಬಿಣ ಹಾಗೂ ಸಮರ್ಪಕವಾಗಿ ಸಿಮೆಂಟ್ ಮತ್ತು ಮರಳನ್ನು ಬಳಸದೇ ಇರುವುದೇ ಕಾಲುವೆ ಮುರಿದು ಬೀಳಲು ಕಾರಣ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಸುಮಾರು ೨೦ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ನೀರು ಜಲಾವೃತಗೊಂಡಿರುವ ಕಾರಣ ಸಲನ್ನು ಬೆಳೆಯಲು ಆಗುತ್ತಿಲ್ಲ. ಈ ಬಗ್ಗೆ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ.
ಶಾಸಕರು, ಅಽಕಾರಿಗಳ ಸೂಚನೆಗೂ ಕಿಮ್ಮತ್ತಿಲ್ಲ : ಕಳಪೆ ಕಾಮಗಾರಿಯಿಂದಾಗಿ ನಿರ್ಮಾಣದ ಹಂತದಲ್ಲಿಯೇ ಕಾಲುವೆ ಕಾಮಗಾರಿ ಮುರಿದಿದ್ದು, ಕಾಮಗಾರಿ ನಿರ್ವಸಿರುವ ಜೆಇ ಹಾಗು ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮವಹಿಸಿಲ್ಲ. ಜತೆಗೆ ತಕ್ಷಣವೇ ಕಾಲುವೆಯನ್ನು ದುರಸ್ತಿಪಡಿಸುವಂತೆ ಆಗಸ್ಟ್‌ನಲ್ಲಿ ಶಾಸಕ ಎನ್. ಮಹೇಶ್ ಹಾಗೂ ಮೇಲಾಽಕಾರಿಗಳು ‘ಟಿ ನೀಡಿ ಸೂಚಿಸಿದರೂ ಸಹ ಸಂಬಂ‘ಪಟ್ಟ ನೀರಾವರಿ ಇಲಾಖೆ ಅಽಕಾರಿಗಳು ಶಾಸಕರ ಮಾತಿಗೂ ಕಿಮ್ಮತ್ತು ನೀಡದೇ ಇರುವುದು ವಿಷಾzನೀಯ.

The Daily News Media

The Daily News Media