ವ್ಯಕ್ತಿತ್ವ ವಿಕಸನಕ್ಕಾಗಿ ಎನ್ನೆಸ್ಸೆಸ್ ಪೂರಕ

ದಿ ಡೈಲಿ ನ್ಯೂಸ್ ಆನೇಕಲ್
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್ನೆಸ್ಸೆಸ್ ಶಿಬಿರ ಪೂರಕ ಎಂದು
ಸೂರ್ತಿ ಸಂಸ್ಥೆಯ ಸಂಸ್ಥಾಪಕ ಅ‘ಕ್ಷ ಗೋಪಾಲ್ ರೆಡ್ಡಿ ತಿಳಿಸಿದರು.
ತಾಲೂಕಿನ ನಾಗನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಸೂರ್ತಿ ಗ್ಲೋಬಲ್ ಡಿಗ್ರಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಎನ್ನೆಸ್ಸೆಸ್ ಶಿಬಿರದ ಮಾಹಿತಿಯನ್ನು ಅವರು ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ದೇಶ‘ಕ್ತಿ, ಸಮಾನತೆ, ‘ವೈಕ್ಯತೆ ಬೆಳೆಸುತ್ತದೆ. ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಸಂಯಮ, ಸಮಯ ಪ್ರeಯನ್ನೂ ಕಲಿಸಿಕೊಡುತ್ತದೆ ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಽಕಾರಿ ಮುರುಳಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಮರಸೂರು ಗ್ರಾಪಂ ಅ‘ಕ್ಷೆ ಮಂಜುಳಾ ಸೋಮಶೇಖರ್, ಉಪಾ‘ಕ್ಷ ನಾಗಪ್ಪ ಕೃಷ್ಣಪ್ಪ, ನಾಗನಾಯಕನಹಳ್ಳಿ ಸದಸ್ಯ ನಾಗಲಕ್ಷ್ಮಿ, ರಶ್ಮಿ ಅನಿಲ್‌ಕುಮಾರ್, ಪಿಯು ಕಾಲೇಜಿನ ಪ್ರಿನ್ಸಿಪಾಲ್ ಡಾ.ವಿಜಯಾ,
ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ಪ್ರಕಾಶ್ ವಿ., ತಿಪ್ಪೇಸ್ವಾಮಿ ಟಿ., ಚಂದ್ರಕಲಾ ಎಸ್. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

The Daily News Media

The Daily News Media