ಜಡಿ ಮಳೆಯ ನಡುವೆಯೂ ಯಶಸ್ವಿಯಾದ ಕಡಲೆಕಾಯಿ ಪರಿಷೆ

ಕಡಲೆಕಾಯಿ ವ್ಯಾಪಾರಿಗಳ ಕುಶಲೋಪರಿ ವಿಚಾರಿಸಿದ ಶಾಸಕ ಎಸ್ ಆರ್ ವಿಶ್ವನಾಥ್
ದಿ ಡೈಲಿ ನ್ಯೂಸ್ ಯಲಹಂಕ
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಯಲಹಂಕದ ವೆಂಕಟಾಲದ ಕಡಲೆಕಾಯಿ ಪರಿಷೆ ಈ ಬಾರಿ ಹಲವು ವಿಶೇಷತೆಗಳೊಂದಿಗೆ ನೆರವೇರಿದ್ದು, ಜಡಿ ಮಳೆಯ ನಡುವೆಯೂ ಸಹಸ್ರಾರು ಜನರನ್ನು ತನ್ನತ್ತ ಆಕರ್ಷಿಸುವ ಮೂಲಕ ಯಶಸ್ವಿಯಾಗಿ ನಡೆಯಿತು.
ಬಿಡಿಎ ಅ‘ಕ್ಷ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ವೆಂಕಟಾಲದ ಕಡಲೆಕಾಯಿ ಪರಿಷೆಗೆ ‘ಟಿ ನೀಡಿ, ಕಡಲೆಕಾಯಿ ವ್ಯಾಪಾರಿಗಳ ಕುಶಲೋಪರಿ, ಅವರ ಬದುಕು-ಬವಣೆ ಕುರಿತು ವಿಚಾರಿಸಿದರು.
ಕಡಲೆಕಾಯಿ ಪರಿಷೆ ಕುರಿತು ಅದರ ಆಯೋಜಕರು, ವೆಂಕಟಾಲ ಅ‘ಯ ಮಹಾಗಣಪತಿ ದೇವಾಲಯದ ‘ರ್ಮದರ್ಶಿಗಳಾದ ಕೆಂಪೇಗೌಡರು ಮಾತನಾಡಿ, ಅ‘ಯ ಮಹಾಗಣಪತಿ ದೇವಾಲಯದ ಆಶ್ರಯದಲ್ಲಿ ಹೊಸ ಪೀಳಿಗೆಯ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಯನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನವಾದ ಶನಿವಾರ ಮೋಡಮುಸುಕಿದ ವಾತಾವರಣ ಮತ್ತು ತುಂತುರು ಮಳೆಯ ಕಾರಣದಿಂದಾಗಿ ಪರಿಷೆ ಕೊಂಚ ಮಂಕಾದಂತೆ ಕಂಡುಬಂತು, ವ್ಯಾಪಾರಿಗಳಿಗೂ ಸಹ ನಿರೀಕ್ಷಿಸಿದಷ್ಟು ವ್ಯಾಪಾರವಾಗದ ಕಾರಣ ಸ್ವಲ್ಪ ಬೇಸರವಾದಂತೆ ಕಂಡು ಬಂತು. ಆದರೆ ಎರಡನೆಯ ದಿನವಾದ ‘ನುವಾರ ಹವಾಮಾನದಲ್ಲಿ ಸ್ವಲ್ಪ ಬದಲಾವಣೆಯ ವಾತಾವರಣ ವಿದ್ದು, ಆಗಾಗ ಬಿಸಿಲು ಮೂಡುತ್ತಿದ್ದ ಕಾರಣದಿಂದಾಗಿ ಜನ ಕಡಲೆಕಾಯಿ ಪರಿಷೆಯ ಕಡೆಗೆ ಮುಖ ಮಾಡಿದರು. ತಮಗಿಷ್ಟವಾದ ಕಡಲೆಕಾಯಿ, ಮಕ್ಕಳ ಆಟಿಕೆಗಳು, ಕೃತಕ ಆ‘ರಣಗಳ ಖರೀದಿಸಲು ಮುಂದಾದರು. ಸಾಯಂಕಾಲದ ವೇಳೆಗೆ ಕಡಲೆಕಾಯಿ ಪರಿಷೆ ಜನರಿಂದ ತುಂಬಿ ತುಳುಕುವಂತಾದದ್ದು ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತು ಎಂದರು.
ಹವಾಮಾನದ ವೈಪರಿತ್ಯದಿಂದಾಗಿ ಮೊದಲ ದಿನ ಕೊಂಚ ಆತಂಕ ಸೃಷ್ಟಿಯಾಗಿತ್ತು ಆದರೆ ಎರಡನೆಯ ದಿನ ಸಹಸ್ರಾರು ಜನ ಕಡಲೆಕಾಯಿ ಪರಿಷೆಗೆ ಆಗಮಿಸಿ, ವಸ್ತುಗಳ ಖರೀದಿ, ಪರಿಷೆಯ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ಮನೋರಂಜನಾ ಸಾ‘ನಗಳ ಬಳಕೆ ಸೇರಿದಂತೆ ಪರಿಷೆಯಲ್ಲಿ ‘ರಪೂರ ವ್ಯಾಪಾರ ಚಟುವಟಿಕೆ ಕೈಗೊಂಡು ಪರಿಷೆ ಯಶಸ್ವಿಗೊಂಡಿದೆ.
ಈ ಬಾರಿ ರೈತರ ಮತ್ತು ಸಾರ್ವಜನಿಕರ ಒತ್ತಾಸೆಯ ಮೇರೆಗೆ ಮುಕ್ತವಾಗಿ ಪರಿಷೆ ಆಯೋಜಿಸಲಾಗಿದ್ದು, ಕಡಲೆಕಾಯಿ ರಾಶಿ ಹಾಕಿ ವ್ಯಾಪಾರ ಮಾಡುವ ಪ್ರತಿಯೊಬ್ಬ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅ‘ಯ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ೫೦೦ ರೂ. ಗೌರವ‘ನ, ಜೊತೆಗೆ ವ್ಯಾಪಾರಸ್ಥರಿಗೆ ೨ ದಿನಗಳ ಕಾಲ ಉಚಿತ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

The Daily News Media

The Daily News Media