ಕಟ್ಟಡದ ತ್ಯಾಜ್ಯ,; ಅಪಘಾತಕ್ಕೆ ಆಹ್ವಾನ

ದಿ ಡೈಲಿ ನ್ಯೂಸ್ ದಾವಣೆಗೆರೆ
ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಯ ಮುಂ‘ಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆ ಬದಿಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ ರಾಶಿಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೇ, ರಾತ್ರಿ ಹೊತ್ತು ಸಂಚರಿಸುವ ವಾಹನಗಳು ಅಪಘಾತವಾಗುವ ಸಂ‘ವಗಳು ಹೆಚ್ಚಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ‘ಕ್ಷರಾದ ಎಚ್. ಕೆ. ಎಸ್. ಸ್ವಾಮಿ ದೂರಿದ್ದಾರೆ.
ಎಲ್ಲ ರಸ್ತೆ ಅಪಘಾತಗಳಿಗೂ ಬೇರೆಯವರನ್ನು ದೂರುವುದಕ್ಕಿಂತ ನಮ್ಮ ನಡತೆಯಲ್ಲೂ ಬದಲಾವಣೆಗಳಾಗಬೇಕು. ಇಲ್ಲದಿದ್ದರೆ ನಾವು ಏನನ್ನು ಸಹ ಸಾಽಸಲು ಸಾ‘ವಿಲ್ಲ. ರಾತ್ರಿ ಹೊತ್ತು ಕದ್ದು ಮುಚ್ಚಿ ಕಟ್ಟಡದ ತ್ಯಾಜ್ಯ, ಮನೆ ಕಸವನ್ನ ರಸ್ತೆ ಬದಿಯಲ್ಲಿ ಸುರಿಯುವ ಹವ್ಯಾಸವನ್ನು ನಿಯಂತ್ರಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ.
ಹಳೆಯ ಕಟ್ಟಡಗಳನು ನಾಶಪಡಿಸಿದಾಗ ಅದರ ತ್ಯಾಜ್ಯವನ್ನು ದೂರ ತೆಗೆದುಕೊಂಡು ಹೋಗಿ ಎಸೆದು ಬರುವಷ್ಟು ಸಮಾ‘ನವಿಲ್ಲದ ಜನರು, ರಸ್ತೆ ಬದಿಯಲ್ಲಿ ಕದ್ದು ಮುಚ್ಚಿ ಸುರಿದು ಹೋಗಿರುವುದರಿಂದ, ನಗರದ ಸೌಂದರ್ಯವೂ ಸಹ ಹಾಳಾಗಿ, ಜನರ ಸುರಕ್ಷತೆಯು ಹಾಳಾಗಿ ಪ್ರಾಣಪಾಯವಾಗುವ ಸಂ‘ವಗಳು ಹೆಚ್ಚಾಗಿವೆ ಎಂದಿದ್ದಾರೆ.
ನಗರಸ‘ಯವರು ಇಂತಹ ತ್ಯಾಜ್ಯ ಎಸೆದವರ ಬಗ್ಗೆ ನಿಗಾವಹಿಸಿ, ಅವರಿಂದ ದಂಡ ವಸೂಲಿ ಮಾಡಿ ಅಥವಾ ಅವರ ಮನಪರಿವರ್ತನೆ ಕೆಲಸವನ್ನಾದರೂ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

The Daily News Media

The Daily News Media