ಮಾಂಗಲ್ಯ ಸರ ಮರಳಿಸಿದ ಕಾರ್ಮಿಕ

ಅಥಣಿ : ಪಟ್ಟಣದ ಮಹಾತ್ಮ ಗಾಂಽಜಿ ಮಾರುಕಟ್ಟೆಯಲ್ಲಿ ಪುರಸ‘ ವಾಹನಗಳ ಮೂಲಕ ಕಸ ಸಂಗ್ರಹಿಸುವ ಪೌರಕಾರ್ಮಿಕರು ಕಸದಲ್ಲಿ ದೊರೆತ ೫೦ ಗ್ರಾಂ ಬಂಗಾರದ ಸರವನ್ನು ಸಂಬಂ‘ಪಟ್ಟ ಮಾಲೀಕರಿಗೆ ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಪ್ರತಿದಿನದಂತೆ ಗುರುವಾರ ಮುಂಜಾನೆ ಎಂ.ಜಿ. ಮಾರ್ಕೆಟ್ ನಲ್ಲಿ ಕಸ ಸಂಗ್ರಹಿಸಿದ ಪೌರಕಾರ್ಮಿಕ ಮಾರುತಿ ‘ಜಂತ್ರಿ ಮತ್ತು ವಾಹನ ಚಾಲಕ ಬಸವರಾಜ ಕೋರಿ ಪಟ್ಟಣದ ಹೊರವಲಯದಲ್ಲಿ ವಾಹನದಲ್ಲಿನ ಕಸವನ್ನು ವಿಲೇವಾರಿ ಮಾಡಿದ್ದರು. ಚಿನ್ನದ ಸರವನ್ನ ಕಳೆದುಕೊಂಡ ಮಾಳಿ ಜ್ಯುವೆಲರಿ iಲೀಕರು ಕಾಗದ ಒಂದರಲ್ಲಿ ಪ್ಯಾಕ್ ಮಾಡಿಟ್ಟಿದ್ದ ಚಿನ್ನದ ಸರ ಕಸದ ಡಬ್ಬಿಯಲ್ಲಿ ಹೋಗಿರುವ ಸಂದೇಹವಿದೆ. ಸ್ವಲ್ಪ ಹುಡುಕಿ ನೋಡಿ ಎಂದು ಪೌರಕಾರ್ಮಿಕರಿಗೆ ಹೇಳಿದ ನಂತರ ಎರಡನೇ ಬಾರಿಗೆ ಕಸ ವಿಲೇವಾರಿ ಮಾಡಲು ಹೋದಾಗ ಮೊದಲನೇ ಬಾರಿ ವಿಲೇವಾರಿ ಮಾಡಿದ್ದ ಕಸದಲ್ಲಿ ಚಿನ್ನದ ಸರ ದೊರಕಿದ್ದು, ಅದನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಪೌರಕಾರ್ಮಿಕ ಮಾರುತಿ ‘ಜಂತ್ರಿ ಮತ್ತು ಬಸವರಾಜು ಕೋರಿ ಅವರನ್ನು ಪಟ್ಟಣದ ವ್ಯಾಪಾರಸ್ಥರು, ಪುರಸ‘ ಮುಖ್ಯ ಅಽಕಾರಿ ಈರಣ್ಣ ದಡ್ಡಿ ಮತ್ತು ಪೌರಕಾರ್ಮಿಕ ಸಂಘದ ಜಿಲ್ಲಾ ಅ‘ಕ್ಷ ಬಸವರಾಜ ಕಾಂಬಳೆ, ತರಕಾರಿ ವ್ಯಾಪಾರಸ್ಥ ಮಂಜುನಾಥ ಯಕ್ಕುಂಡಿ ಅಭಿನಂದಿಸಿದ್ದಾರೆ.

The Daily News Media

The Daily News Media