ಏಕತೆಗೆ ಪಟೇಲ್, ಪ್ರಗತಿಗೆ ಕೆಂಪೇಗೌಡ

ದಿ ಡೈಲಿ ನ್ಯೂಸ್ ಬಂಗಾರಪೇಟೆ
ದೇಶದ ಏಕತೆಗೆ ಸರದಾರ್ ವಲ್ಲ‘ಯಿ ಪಟೇಲರು ಪ್ರತೀಕವಾದರೆ, ನಾಡು ಕಟ್ಟಲು ಶ್ರಮಿಸಿದ ನಾಡಪ್ರ‘ ಕೆಂಪೇಗೌಡರು ಪ್ರಗತಿಯ ಸಂಕೇತವಾಗಿದ್ದಾರೆ ಎಂದು ಚಿಕ್ಕ ಅಂಕಂಡ ಹಳ್ಳಿ ಗ್ರಾ.ಪಂ.ಅ‘ಕ್ಷ ಎಚ್. ಎಂ ರವಿ ಅಭಿಪ್ರಾಯಪಟ್ಟರು. ಕೆಂಪೇಗೌಡರ ಪವಿತ್ರ ಮೃತ್ತಿಕೆ ರಥಯಾತ್ರೆಯ ಬೀಳ್ಕೊಡುವ ಸಮಾರಂ‘ ಉದ್ದೇಶಿಸಿ ಅವರು ಮಾತನಾಡಿದರು. ಬೆಂಗಳೂರಿನ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಕೆಂಪೇಗೌಡರ ಪ್ರತಿ ಸ್ಥಾಪನೆಯ ಉದ್ದೇಶವೆಂದರೆ ಕೆಂಪೇಗೌಡರ ಹೋರಾಟ, ನಾಡನ್ನು ಕಟ್ಟಲು ಶ್ರಮಿಸಿದ ವ್ಯಕ್ತಿತ್ವ, ತ್ಯಾಗ, ಚಿಂತನಾ ಲಹರಿಗಳು ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂಬುದಾಗಿದೆ ಎಂದರು. ಕಳೆದ ಎರಡು ದಿನಗಳಿಂದ ಬಂಗಾರಪೇಟೆ ವಿ‘ನಸ‘ ಕ್ಷೇತ್ರದ ೨೧ ಗ್ರಾ.ಪಂ. ಮೂಲಕ ಸಂಚರಿಸಿದ ರಥಯಾತ್ರೆಯು ಸೂಲಿಕುಂಟೆ ಗ್ರಾ.ಪಂ. ಮಾರ್ಗವಾಗಿ ಕೆಂಪೇಗೌಡ ವೃತಕ್ಕೆ ಆಗಮಿಸಿ, ನಂತರ ಯಾತ್ರೆ ಮುಂದುವರಿಸಿತು. ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪನವರ, ಎಂ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಉಪಾ‘ಕ್ಷ ಬಿ.ವಿ ಮಹೇಶ್, ಒಕ್ಕಲಿಗ ಸಂಘದ ಅ‘ಕ್ಷ ಶಿವಕುಮಾರ್, ಕಾರ್ಯದರ್ಶಿ ಪ್ರಕಾಶ್, ಮಾರ್ಕಂಡೆಯ ಗೌಡ, ಅಮರೇಶ್, ಹೊಸರಾಯಪ್ಪ, ಮುಖ್ಯ ಕಾರ್ಯನಿರ್ವಹಣಾಽಕಾರಿ ವೆಂಕಟೇಶಪ್ಪ, ತಹಸೀಲ್ದಾರ್ ದಯಾನಂದ್, ಪಿ ಡಿ ಓ ಚಿತ್ರಾ, ಶಂಕರ್, ನಾರಾಯಣಪ್ಪ ಸೇರಿದಂತೆ ಇತರೆ ಗಣ್ಯರಿದ್ದರು.

The Daily News Media

The Daily News Media