ರೈತ ಬೆಳೆಯದಿದ್ದರೆ ಅಕ್ಕಿ ಎಲ್ಲಿ?

ದಿ ಡೈಲಿ ನ್ಯೂಸ್ ತುಮಕೂರು
ರೈತರೇ ಬೆಳೆಯದಿದ್ದರೆ ಅಕ್ಕಿ ಎಲ್ಲಿಂದ ತರುತ್ತೀರಿ ಎನ್ನುವ ಮೂಲಕ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ, ರೈತ ಬೆಳೆಯುವ ಎಲ್ಲ ಉತ್ಪನ್ನಗಳಿಗೆ ವೈಜ್ಞಾನಿಕ ಬೆಳೆ ನೀಡುವುದು ಅಗತ್ಯ ಎಂದು ಸಮರ್ಥಿಸಿಕೊಂಡರು.
ತುಮಕೂರು ತಾಲೂಕು ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಯಾವುದೇ ಇರಲಿ,ಅತಿವೃಷ್ಟಿ ಮತ್ತು ಆನಾವೃಷ್ಟಿಯಂತಹ ಸಂದ‘ದಲ್ಲಿ ತೊಂದರೆಗೆ ಒಳಗಾಗುವ ರೈತರ ನೆರವಿಗೆ ಬರುವ ಅಗತ್ಯವಿದೆ. ರೈತರ ಬದುಕಿದರೆ ಮಾತ್ರ ದೇಶ ಬದುಕಲು ಸಾ‘. ರೈತನೇ ಬೆಳೆಯದಿದ್ದರೆ ಪುಕ್ಕಟೆ ಅಕ್ಕಿ ಕೊಡುವ ಯೋಜನೆಗೆ ಅಗತ್ಯ ವಸ್ತುವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ ರೈತನನ್ನು ಉಳಿಸುವುದರ ಜೊತೆಗೆ, ಜನತೆಯೂ, ದೇಶವೂ ಉಳಿಯಲು ಸಾ‘ ಎಂದರು.

ರೈತರ ರಕ್ಷಣೆ ಅಗತ್ಯ
‘ರತ ಕೃಷಿ ಪ್ರ‘ನ ರಾಷ್ಟ್ರ ಎಂಬುದು ಕೇವಲ ಹೇಳಿಕೆ ಮಾತ್ರ. ೧೯೬೦ರವರೆಗೆ ‘ರತದ ಜನಸಂಖ್ಯೆಗೆ ಬೇಕಾಗುವಷ್ಟ ಆಹಾರ ಬೆಳೆಯಲು ನಮ್ಮಲ್ಲಿ ಯಾವುದೇ ಯೋಜನೆಗಳಿರಲಿಲ್ಲ. ಆದರೆ, ಹಸಿರು ಕ್ರಾಂತಿಯ ಪರಿಣಾಮ ಇಂದು ನಾವು ಆಹಾರದಲ್ಲಿ ಸ್ವಾವಲಂಬನೆ ಸಾಽಸಲು ಸಾ‘ವಾಯಿತು. ಅದರ ಲವಾಗಿಯೇ ಇಂದು ನಾವು ಪುಕ್ಕಟ್ಟೆ ಅಕ್ಕಿ ಹಂಚಿ, ನಮ್ಮ ರಾಜಕೀಯ ಅಽಕಾರ ನಡೆಸುತ್ತಿದ್ದೇವೆ. ಹಾಗಾಗಿ, ರೈತನ ಬೆಳೆಗೆ ವೈಜ್ಞಾನಿಕ ಬೆಲೆಯ ಜೊತೆಗೆ,ಪ್ರಕೃತಿ ವಿಕೋಪಗಳ ಸಂದ‘ದಲ್ಲಿ ರೈತರ ರಕ್ಷಣೆಗೆ ನಾವೆಲ್ಲರೂ ನಿಲ್ಲಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಸ್ಪೂರ್ತಿ ಡೆವೆಲಪರ್‍ಸ್ ನ ಎಸ್.ಪಿ.ಚಿದಾನಂದ ಮಾತನಾಡಿ, ಕೃಷಿಮೇಳವು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ರೈತಸಂಸ್ಕೃತಿಯನ್ನು ಬೆಂಬಲಿಸಬೇಕು ಎಂದರು.

The Daily News Media

The Daily News Media