ಮಳೆಹಾನಿ ಪರಿಹಾರಕ್ಕೆ ತುರ್ತು ಕ್ರಮ

ದಿ ಡೈಲಿ ನ್ಯೂಸ್ ಚಿಕ್ಕಬಳ್ಳಾಪುರ: ‘ಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮಳೆಯಿಂದ ಬೆಳೆ ಹಾನಿ, ಮನೆ ಹಾನಿ, ಜಾನುವಾರು ಜೀವ ಹಾನಿ ಉಂಟಾದ ಸಂತ್ರಸ್ತರಿಗೆ ಯಾವುದೇ ರೀತಿಯ ವಿಳಂಬ ಮಾಡದೇ ತಕ್ಷಣವೇ ಪರಿಹಾರವನ್ನು ನೀಡಬೇಕು. ಆ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಏಕ್‌ರೂಪ್ ಕೌರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದ ಬಳಿಕ ಜಿಲ್ಲಾಡಳಿತ ಕಚೇರಿ ಸ‘ಾಂಗಣದಲ್ಲಿ ಆಯೋಜಿಸಿದ್ದ ಮಳೆಹಾನಿ ಕುರಿತ ಪ್ರಗತಿ ಪರಿಶೀಲನಾ ಸ‘ೆಯ ಅ‘್ಯಕ್ಷತೆ ವಹಿಸಿದ್ದ ಅವರು ಮಾತನಾಡುತ್ತ, ಜಿಲ್ಲೆಯಲ್ಲಿ ಒಂದು ವಾರದಲ್ಲಿ 201.4 ಮಿ.ಮೀ.ಮಳೆಯಾಗಿದೆ. ಸೆ.6ರಂದು ಒಂದೇ ದಿನ ವಾಡಿಕೆಗಿಂತ ಶೇ.76.79ರಷ್ಟು ಅಧಿಕ ಮಳೆಯಾಗಿದೆ. ಈ ಮಳೆಯಿಂದಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳು, ಜಾನುವಾರು ಜೀವ ಹಾನಿ, ರಸ್ತೆ, ವಿದ್ಯುತ್ ಕಂಬ, ಅಂಗನವಾಡಿ ಕಟ್ಟಡ, ಶಾಲಾ ಕಟ್ಟಡ, ಮನೆ ಹಾನಿ ಸೇರಿದಂತೆ ವಿವಿ‘ ತೆರನಾದ ಹಾನಿಗೆ ಜಿಲ್ಲೆ ಒಳಗಾಗಿದೆ. 242.8 ಹೆಕ್ಟೇರ್‌ನಷ್ಟು ಕೃಷಿ ಬೆಳೆ, 1129.08 ಹೆ. ತೋಟಗಾರಿಕೆ ಬೆಳೆ ಹಾನಿಯಾಗಿದೆ. 9ಮನೆಗಳು ಪೂರ್ಣಹಾನಿಯಾಗಿದ್ದು, 137 ಮನೆಗಳು ತೀವ್ರತರವಾಗಿ ಹಾನಿಯಾಗಿವೆ. 116 ಮನೆಗಳು ‘ಾಗಶಃ ಹಾನಿಗೊಳಗಾಗಿವೆ. ಇದಲ್ಲದೇ 256 ವಿದ್ಯುತ್ ಕಂಬಗಳು, 10 ವಿದ್ಯುತ್ ಪರಿವರ್ತಕಗಳು 22 ಸೇತುವೆಗಳು, ಕಲ್ವರ್ಟ್, 23 ಅಂಗನವಾಡಿಗಳು, 25 ಜಾನುವಾರುಗಳ ಜೀವಹಾನಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಎಸ್‌ಪಿ ಡಿ.ಎಲ್.ನಾಗೇಶ್, ಜಿಪಂ ಸಿಇಒ ಪಿ.ಶಿವಶಂಕರ್, ಎಚ್.ಅಮರೇಶ್, ಡಾ.ಜಿ.ಸಂತೋಷ್ ಕುಮಾರ್, ಶಿವಕುಮಾರ್, ತಹಸೀಲ್ದಾರ್ ಗಣಪತಿಶಾಸ್ತ್ರಿ ಮತ್ತಿತರರು ಹಾಜರಿದ್ದರು.

The Daily News Media

The Daily News Media