ಶಾಲೆಗೆ ಹೋಗಲು ಹಳ್ಳ ದಾಟಲೇ ಬೇಕು

ದಿ ಡೈಲಿ ನ್ಯೂಸ್ ಹರಪನಹಳ್ಳಿ: ಬಳಿಗನೂರು ಗ್ರಾಮದಿಂದ ಸಂಗಮೇಶ್ವರ ಗ್ರಾಮದ ಶಾಲೆಗೆ ಹೋಗುವ ಶಾಲಾ ವಿದ್ಯಾರ್ಥಿಗಳು ಹಳ್ಳ ದಾಟಿ ಹೋಗಬೇಕು. ವಿದ್ಯಾರ್ಥಿಗಳು ತಮ್ಮ ಪಾಟಿಚೀಲ ತಲೆಮೇಲೆ ಹೊತ್ಕೊಂಡು, ಜೀವವನ್ನು ಲೆಕ್ಕಿಸದೇ ಹಳ್ಳ ದಾಟುವ ಸ್ಥಿತಿ ಎದುರಾಗಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬಳಿಗನೂರು ಗ್ರಾಮದಲ್ಲಿ 1ರಿಂದ 5ನೇ ತರಗತಿವರೆಗೆ ಮಾತ್ರ ಶಾಲೆ ಇದ್ದು , ಮುಂದಿನ ವ್ಯಾಸಂಗಕ್ಕೆ ಪಕ್ಕದ ಸಂಗಮೇಶ್ವರ ಗ್ರಾಮಕ್ಕೆ ಹೋಗಬೇಕು. ಆದ್ರೆ ಅಲ್ಲಿಗೆ ಹೋಗಬೇಕಾದರೆ ಹಳ್ಳ ದಾಟಲೇಬೇಕು ಈ ಹಳ್ಳಕ್ಕೆ ಯಾವುದೇ ಸೇತುವೆಯ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ವಿದ್ಯಾ‘್ಯಾಸ ಪಡೆಯಬೇಕಾದರೆ ಹಳ್ಳ ದಾಟಿ ಶಾಲೆಗೆ ಹೋಗಬೇಕು. ಹಾಗಾಗಿ ಮಕ್ಕಳ ಸ್ಥಿತಿ ಅಯೋಮಯವಾಗಿದೆ. ಜೀವ ಪಣಕ್ಕಿಟ್ಟು ಶಾಲೆಗೆ ತೆರಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಸೇತುವೆ ನಿರ್ಮಾಣ ಕೈಗೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಬಳಿಗನೂರು ಹಾಗೂ ಸಂಗಮೇಶ್ವರ ಮ‘್ಯಹಳ್ಳ ತುಂಬಿದ ಪರಿಣಾಮ ಮಾರ್ಗ ಸಂಚಾರ ಅಸ್ತವ್ಯಸ್ತವಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ.
ಬಳಿಗನೂರು ಗ್ರಾಮದಿಂದ ಸಂಗಮೇಶ್ವರ, ಕೊಟ್ಟೂರು ತಲುಪುವ ಈ ಮಾರ್ಗದ ಮ‘್ಯೆ ಹಳ್ಳ ತುಂಬಿ ಹರಿದ ಪರಿಣಾಮ ವಿದ್ಯಾರ್ಥಿಗಳಿಗೆ ಗ್ರಾಮದ ಜನರಿಗೆ ತೊಂದರೆಯಾಗಿದೆ. ಹಳ್ಳ ದೊಡ್ಡ ಗುಂಡಿಗಳಿಂದ ತುಂಬಿದ ಪರಿಣಾಮ ಮಕ್ಕಳಿಗೆ ಅಪಾಯ ಹೆಚ್ಚು . ಇದರಿಂದ 6ರಿಂದ 8ನೇ ತರಗತಿ ವಿದ್ಯಾ‘್ಯಾಸಕ್ಕೆ ಬಳಿಗನೂರು ಗ್ರಾಮದಲ್ಲೇ ಶಾಲೆ ನಿರ್ಮಾಣ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮುಖಂಡರಾದ ಬಾಲಗಂಗಾ‘ರ್, ಎಚ್ ಎಂ ಕೊಟ್ರೇಶ್, ಹಾಗೂ ಗ್ರಾಮಸ್ಥರಾದ ಕರೀಂ ಸಾಹೇಬ್, ರಾಮನಗೌಡ, ಸುರೇಶ್ ದೊಡ್ಮನಿ, ರೇವಣಸಿದ್ದಪ್ಪ ಗೌಡ ಪರಶುರಾಮ್,ಮಹೇಶ್, ದಾನಪ್ಪ, ಘನೀಸಾಹೇಬ್, ಹನುಮಂತಪ್ಪ ದೊಡ್ಮನಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಇದ್ದರು .

The Daily News Media

The Daily News Media