ಅನೈತಿಕ ಚಟುವಟಿಕೆಗಳ ಪಾರ್ಕ್

ದಿ ಡೈಲಿ ನ್ಯೂಸ್ ಬಾಗೇಪಲ್ಲಿ: ಪಟ್ಟಣದ ಚಿತ್ರಾವತಿ ನದಿ ದಡದಲ್ಲಿರುವ ನಿರ್ಮಲ ‘ಕ್ತಿ ತಾಣ ಹಾಗೂ ಪ್ರಸಿದ್ಧ ಜಡಲ‘ೈರವೇಶ್ವರ ದೇಗುಲದ ಚಿತ್ರಾವತಿ ಇಕೋ ಉದ್ಯಾನವನ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕುಡುಕ ಮತ್ತು ಜೂಜುಕೋರರ ಅಡ್ಡೆಯಾಗಿರುವುದು ಸಾರ್ವಜನಿಕರು, ವಾಯುವಿಹಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಬಹುದಿನಗಳ ಕನಸಿನಂತೆ ಅನೇಕ ಜನಪ್ರತಿನಿಧಿಗಳ ಒತ್ತಾಸೆಯಿಂದ ಈ ಚಿತ್ರಾವತಿ ಇಕೋ ಉದ್ಯಾನವನ ಅನುಷ್ಠಾನಗೊಂಡಿತ್ತು. ಆದರೆ ಈ ಉದ್ಯಾನವನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಅನೇಕ ಯೋಜನೆಗಳು ಮೂಲೆಗುಂಪಾಗಿರುವಂತೆ ಇದೂ ಸಹ ಪತನಕ್ಕೆ ಹೊಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಉದ್ಯಾನವನಕ್ಕೆ ಬೀಗ ಹಾಕಿದ್ದರೂ ಸಹ ಪುಂಡುಪೋಕರಿಗಳು ಕಬ್ಬಿಣದ ಬಾಗಿಲುಗಳನ್ನು ಹತ್ತಿ ಒಳಗೆ ಪ್ರವೇಶಿಸಿ ಅನೈತಿಕ ಚಟುವಟಿಕೆಗಳ ತಾಣವನ್ನಾಗಿಸಿದ್ದಾರೆ. ಮದ್ಯದ ಬಾಟಲಿಗಳು, ಬೀಡಿ, ಸಿಗರೇಟು ಸೇರಿದಂತೆ ಅನೈತಿಕ ಚಟುವಟಿಕೆಗೆ ಬಳಸಿದ ತ್ಯಾಜ್ಯವಸ್ತುಗಳು ಆವರಿಸಿವೆ. ಸೆಕ್ಯೂರಿಟಿಗಾಗಿ ನಿರ್ಮಿಸಿರುವ ಕೊಠಡಿಗೆ ಬೀಗ ಜಡಿಯಲಾಗಿದೆ.
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ 2004ರಲ್ಲಿ ಪಟ್ಟಣದ ಹೊರವಲಯದ ಚಿತ್ರಾವತಿ ನದಿ ದಡದ ಐತಿಹಾಸಿಕ ಜಡಲಬೈರವೇಶ್ವರ ದೇಗುಲದ ಪಕ್ಕದಲ್ಲಿ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯ 8-20 ಎಕರೆ ಪ್ರದೇಶದಲ್ಲಿ ಚಿತ್ರಾವತಿ ಇಕೋ ಉದ್ಯಾನವನಕ್ಕೆ ‘ೂಮಿ ಪೂಜೆ ಸಲ್ಲಿಸಿದ್ದರು. 2011ರಲ್ಲಿ ಮಾಜಿ ಶಾಸಕ ಎನ್.ಸಂಪಂಗಿ ಅವಧಿಯಲ್ಲಿ ಈ ಉದ್ಯಾನವನ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಗೆ ಸೇರಿದ್ದರೂ, ಪಟ್ಟಣದಲ್ಲಿ ಯಾವುದೇ ಉದ್ಯಾನಗಳಿಲ್ಲದ ಕಾರಣ ಹಾಗೂ ಪಟ್ಟಣಕ್ಕೆ ಹತ್ತಿರವಿರುವ ಕಾರಣದಿಂದ ಪುರಸ‘ೆ ವತಿಯಿಂದ ರಾಜ್ಯ ಸರ್ಕಾರದ ಮುಖ್ಯಮಂತ್ರಿಯವರ ಸಣ್ಣ ಮತ್ತು ಮಾ‘್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯ 25 ಲಕ್ಷ ಅನುದಾನದಲ್ಲಿ ಈ ಸುಂದರ ಉದ್ಯಾನವನ ನಿರ್ಮಾಣ ಮಾಡಿ, ಪುರಸ‘ೆಯಿಂದ ಇದರ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಅಧಿಕಾರಾವಧಿಯಲ್ಲಿ ಮುಖ್ಯರಸ್ತೆಯಿಂದ ಜಡಲಬೈರವೇಶ್ವರ ದೇಗುಲದವರೆಗೆ ಟಾರ್ ರಸ್ತೆ ನಿರ್ಮಿಸಲಾಯಿತು.
ಈಗ ಪಾರ್ಕ್ ನೋಡಿದರೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಚಿತ್ರಾವತಿ ಇಕೋ ಉದ್ಯಾನವನದಲ್ಲಿ ಸೂಕ್ತ ನಿರ್ವಹಣೆಯೊಂದಿಗೆ, ದಿನದ 24ಗಂಟೆ ಸಮಯದಲ್ಲಿ ಕಾರ್ಯನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ ನೇಮಿಸಿ, ಸೂಕ್ತ ರಕ್ಷಣೆ ನೀಡಬೇಕಾಗಿದೆ.ಅನೈತಿಕ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆ ಕ್ರಮ ವಹಿಸಬೇಕಾಗಿದೆ.

The Daily News Media

The Daily News Media