ಅಕ್ರಮವಾಗಿ ಮನೆ ನಿರ್ಮಿಸಿದ ಆರೋಪ ಸುಳ್ಳು

ದಿ ಡೈಲಿ ನ್ಯೂಸ್ ಹೊಸಪೇಟೆ: ಅತಿಕ್ರಮಣ, ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗಗಳನ್ನು ಸರ್ಕಾರದ ವಶಕ್ಕೆ ಪಡೆಯುತ್ತಿರುವುದರಿಂದ ತಮ್ಮ ಮೇಲೆ ನಗರದ ‘ೂಗಳ್ಳರ ತಂಡವೊಂದು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಪ್ರವಾಸೋದ್ಯಮ, ಪರಿಸರ ಸಚಿವ ಆನಂದ ಸಿಂಗ್ ಹೇಳಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಬಳ್ಳಾರಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ತಮ್ಮ ಮೇಲೆ ಮಾಡಿರುವ ಆರೋಪ ಸತ್ಯಕೆ ದೂರವಾಗಿದೆ. ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡು ನಾನು ಮನೆಯನ್ನು ನಿರ್ಮಿಸಿಲ್ಲ. ನನ್ನದೇ ಜಾಗವನ್ನು ರಸ್ತೆಗಾಗಿ ಸರ್ಕಾರಕ್ಕೆ ನೀಡಿದ್ದೇನೆ. ಮತ್ತು ನೀಡಿರುವ ಜಮೀನಿಗೆ ಯಾವುದೇ ಪರಿಹಾರ ಹಣವನ್ನು ಪಡೆದಿಲ್ಲ. ವಸ್ತುಸ್ಥಿತಿ ಹೀಗಿರುವಾಗ ನಾನು ಸರ್ಕಾರಿ ಜಾಗೆ ಕಬಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಆರ್‌ಟಿಐ ಕಾರ್ಯಕರ್ತ ಶ್ರೀ‘ರ್ ಅವರು ಲೋಕಾಯುಕ್ತ ನೀಡಿರುವ ದೂರಿನ ಪ್ರತಿಯ ಆ‘ಾರದ ಮೇಲೆ ಉಗ್ರಪ್ಪ ಅವರು ನನ್ನ ಮೇಲೆ ಆರೋಪಗಳನ್ನು ಮಾಡಿದ್ದಾರೆ ಹೊರತು ಯಾವುದೇ ಅಧಿಕೃತ ದಾಖಲೆಗಳ ಆ‘ಾರದ ಮೇಲೆ ಅಲ್ಲ ಎಂದು ಹೇಳಿದರು.
ಪೋಲಪ್ಪ ಅವರ ಕುಟುಂಬಕ್ಕೆ ನಾನು ಯಾವುದೇ ಬೆದರಿಕೆ ಹಾಕಿಲ್ಲ ಮತ್ತು ಜಾತಿ ನಿಂದನೆ ಕೂಡ ಮಾಡಿಲ್ಲ. ನಗರದ ‘ೂಗಳ್ಳರ ತಂಡ ಪೋಲಪ್ಪನನ್ನು ಬಲಿಪಶುವನ್ನಾಗಿ ಮಾಡಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿಸುತ್ತಿದೆ ಎಂದರು.
ಪೋಲಪ್ಪ ತಮ್ಮ ಆಸ್ತಿಯನ್ನು ಎಂದು ಹೇಳುತ್ತಿರುವ ಮಲ್ಲಿಕಾರ್ಜುನ ಮಠದ ಆಸ್ತಿಯು 1895ರ ದಾಖಲೆಗಳ ಪ್ರಕಾರ ಮಠದ್ದೇ ಆಗಿದೆ. ಹೀಗಿರುವಾಗ ನಗರಸ‘ೆ ಮಾಜಿ ಸದಸ್ಯ ಡಿ.ವೇಣುಗೋಪಾಲ ಮತ್ತು ಇವರ ತಂಡ ಸೇರಿಕೊಂಡು ಮಠದ ಆಸ್ತಿಯನ್ನು ತಾವೇ ಪಡೆಯಬೇಕು ಎಂಬ ದುರುದ್ದೇಶದಿಂದ ಮಲ್ಲಿಕಾರ್ಜುನ ಮಠ ಜೀರ್ಣೋದ್ಧಾರ ಸಂಘವನ್ನು ರಚಿಸಿಕೊಂಡು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ಸಚಿವರು ಆರೋಪಿಸಿದರು.

The Daily News Media

The Daily News Media