ದ್ರಾಕ್ಷಿ ಉತ್ತೇಜನಕ್ಕೆ ಅಭಿವೃದ್ದಿ ಮಂಡಳಿ

ದಿ ಡೈಲಿ ನ್ಯೂಸ್ ವಿಜಯಪುರ: ವಿಜಯಪುರ ಜಿಲ್ಲೆ ದ್ರಾಕ್ಷಿ ಬೆಳೆಗೆ ಪ್ರಸಿದ್ಧಿಯನ್ನು ಪಡೆದಿದ್ದು, ಅದರ ಉತ್ತೇಜನಕ್ಕಾಗಿ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ರಸ ಮತ್ತು ದ್ರಾಕ್ಷಿ ಅಭಿವೃದ್ದಿ ಮಂಡಳಿಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ತೋಟಗಾರಿಕೆ ವಿವಿ, ಕೃಷಿ ವಿವಿ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿ ಪರಿಕರ ಮಾರಾಟಗಾರರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಮೂರು ದಿನಗಳಿಂದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಕೃಷಿಮೇಳದ ಸಮಾರೋಪ ಸಮಾರಂ‘ದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಮಾಡಲು ರೈತರಿಗೆ ವಿುಲ ಅವಕಾಶಗಳಿವೆ. ಕೃಷಿ ಮೇಳದಲ್ಲಿ ರೈತರಿಗೆ ಒಂದೇ ಸೂರಿನಡಿ ಎಲ್ಲಾ ಉತ್ಪನ್ನಗಳನ್ನು ನೋಡುವ ಮತ್ತು ಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಂಡಿರುವುದು ತುಂಬಾ ಒಳ್ಳೆಯ ಕೆಲಸವಾಗಿದೆ ಎಂದು ಹೇಳಿದರು.
ನಗರದಲ್ಲಿ ದ್ರಾಕ್ಷಿ ಮಾರಾಟ ಮಾಡಲು ಆನೆ್ಲೈನ್ ವ್ಯವಸ್ಥೆಯಿದ್ದರೂ ಕೂಡ ಕೆಲವೊಂದು ಪಟ್ಟ‘ದ್ರ ಹಿತಾಸಕ್ತಿಗಳಿಂದ ನಮ್ಮ ರೈತರು ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದರು. ಅವರಿಗೆ ಇದರ ಆ‘ಾರದ ಮೇಲೆ ಬಡ್ಡಿ ಮೇಲೆ ಹಣವನ್ನು ತೆಗೆದುಕೊಂಡು ಬರುತ್ತಿದ್ದರು. ಮುಂದೊಂದು ದಿನ ಬಡ್ಡಿ ಹೆಚ್ಚಾಗಿ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿರಲಿಲ್ಲ. ತಾವು ಶಾಸಕರಾದ ಮೇಲೆ ಆನ್‌ಲೈನ್ ವ್ಯವಸ್ಥೆಯನ್ನು ಸ್ಥಾಪಿಸಿದ್ದು, ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಯಾರ ಸಹಾಯವಿಲ್ಲದೆ ತಮಗೆ ಬೇಕಾದ ಯೋಗ್ಯ ಬೆಲೆಯಲ್ಲಿ ನೇರವಾಗಿ ಮಾರಾಟ ಮಾಡಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು ರೈತರು ವಾಣಿಜ್ಯ ಬೆಳೆಗಳನ್ನು ಮತ್ತು ಕಬ್ಬನ್ನು ಬೆಳೆಯಬಹುದಾಗಿದೆ. ಮುಂಬರುವ ದಿನಗಳಲ್ಲಿ ತಾವು ಪ್ರಾರಂಭಿಸಲಿರುವ ಸಕ್ಕರೆ ಕಾರ್ಖಾನೆಗೆ ಸಕ್ಕರೆಯನ್ನು ಉತ್ಪಾದಿಸದೆ, ಇಂ‘ನಕ್ಕೆ ಬೇಕಾಗುವ ಇಥನಾಲ್ ಉತ್ಪಾದನೆ ಮಾಡಿ, ರೈತರು ಬೆಳೆದ ಕಬ್ಬಿನ ಬೆಳೆಗೆ ಅಧಿಕ ಬೆಲೆ ಬರುತ್ತದೆ ಮತ್ತು ಪರಿಸರ ಮಾಲಿನ್ಯವನ್ನು ಕೂಡ ತಡೆಗಟ್ಟಿದಂತಾಗುತ್ತದೆ ಎಂದರು.
ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್‌ಬಿ ಬೆಳ್ಳಿ, ಡಾ.ಹಿಪ್ಪರಗಿ, ಡಾ.ಸಂಗಮೇಶ್ ಗೊಳ್ಳಗಿ, ಸಿದ್ದಣ್ಣ ಠೋಕೆ, ಚಂದ್ರೇಗೌಡ, ಉಮಾಪತಿ, ಕಲ್ಮೇಶ್ ಉಪಸ್ಥಿತರಿದ್ದರು.

 

The Daily News Media

The Daily News Media