ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯ

ದಿ ಡೈಲಿ ನ್ಯೂಸ್ ಹುಣಸೂರು
ಸ್ವತಂತ್ರ ಬಂದು 75 ವರ್ಷ ಕಳೆದರೂ ರಾಜ್ಯದ ನದಿಗಳ ಸಂರಕ್ಷಣೆ ಮತ್ತು ನೀರು ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ನಮ್ಮ ರಾಜ್ಯದ ನದಿಗಳ ನೀರು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ನದಿ ಸಂರಕ್ಷಣೆ ಮಾಡಿ ನೀರನ್ನು ಸಂಗ್ರಹಿಸಿ ಪ್ರತಿ ರೈತನ ಜಮೀನಿಗೆ ನೀರು ಹರಿಸುವ ಮಹತ್ತರವಾದ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ರತ್ನಪುರಿ ರಸ್ತೆಯಲ್ಲಿರುವ ಸಲೀಮ್ ಪ್ಯಾಲೇಶ್‌ನಲ್ಲಿ ಜೆಡಿಎಸ್ ಪಕ್ಷದಿಂದ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ರೈತರಿಗೆ ಬೆಳೆದಂತಹ ತಂಬಾಕು ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಹೋರಾಟ ಹಾಗೂ ನ್ಯಾಯ ಕೊಡಿಸುವಲ್ಲಿ ರೈತರ ಪರ ಎಚ್.ಡಿ.ದೇವೇಗೌಡರು ನಿಂತಿದ್ದರು ಎಂದು ತಿಳಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ದುರಾಡಳಿತದಿಂದ ಬೆಸೆತ್ತ ರಾಜ್ಯದ ಜನತೆಗೆ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಜನತಾ ಜಲಧಾರೆ ಸೇರಿದಂತೆ ಐದು ವಿಶೇಷ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ನೀಡುವ ಮೂಲಕ, ಕನ್ನಡ ನಾಡನ್ನು ಹಚ್ಚಹಸಿರು ನಾಡನಾಗಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಕೆ.ಅರ್.ನಗರದ ಶಾಸಕ ಸಾ.ರಾ.ಮಹೇಶ್, ತಾಲೂಕು ಜೆಡಿಎಸ್ ಅದ್ಯಕ್ಷ ದೇವರಳ್ಳಿಸೋಮಶೇಖರ್, ಉಪಾದ್ಯಕ್ಷ ದೇವರಾಜ್‌ಒಡೆಯರ್, ಮಾಜಿ ಜಿ.ಪಂ ಸದಸ್ಯರಾದ ಹೆಚ್.ಎಂ ಫಜಲುಲ್ಲಾ, ನಗರಸಭಾ ಸದಸ್ಯರಾದ ಕೃಷ್ಣರಾಜಗುಪ್ತ, ಸರವಣ,ಶಾಹೀನ್ ತಾಜ್, ಶ್ರೀನಾಥ್, ಶಿ.ದೇವರಾಜು,ರಾಣಿಪೆರುಮಾಳ್, ನಂಜಪ್ಪ, ಕುಮಾರ, ಸಿರಾಜ್‌ಪಾಷ,ಸರ್ದಾರ್,ಅಫ್ರೋ್, ಮಾಜಿ ಪುರಸಭಾ ಅದ್ಯಕ್ಷರಾದ ಹೆಚ್.ಎನ್.ಚಂದ್ರಶೇಖರ್, ಉಪಸ್ಥಿತರಿದ್ದರೂ.

 

 

The Daily News Media

The Daily News Media