ಮಾತು ತಪ್ಪಿದವರ ವಿರುದ್ಧ ಹೋರಾಟಕ್ಕೆ ಸಿದ್ಧ

ದಿ ಡೈಲಿ ನ್ಯೂಸ್ ಸಿಂದಗಿ
ಉಪ ಚುನಾವಣೆ ವೇಳೆ ತಳವಾರ ಸಮುದಾಯಕ್ಕೆ ಪರಿಶಿ? ಜಾತಿ ಪ್ರಮಾಣ ಪತ್ರ ಕೊಡುತ್ತೇವೆ ಎಂದು ಹೇಳಿ, ಮಾತು ತಪ್ಪಿದ ಸರ್ಕಾರದ ವಿರುದ್ಧ ಅರೆ ಬೆತ್ತಲೆ ಹೋರಾಟ ಮಾಡುತ್ತೇವೆ ಎಂದು ತಳವಾರ ಮತ್ತು ಪರಿವಾರ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಕಿಡಿ ಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಸ್‌ಟಿ ಸರ್ಟಿಫಿಕೇಟ್ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತಳವಾರ ಸಮುದಾಯದ ಬಿಜೆಪಿಗೆ ಗೆಲುವಿಗೆ ಸಹಕರಿಸಿದ್ದರು. ಚುನಾವಣೆ ಗೆದ್ದ ನಂತರ ಸುತ್ತೋಲೆ ಬಂದರೂ ತಾಂತ್ರಿಕ ದೋ?ದಿಂದ ಪ್ರಮಾಣ ಪತ್ರ ಸಿಗುತ್ತಿಲ್ಲ. ಇನ್ನು ಮುಂದೆ ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಇದೇ ೧೮ರಂದು ಸಿಂದಗಿಯಲ್ಲಿ ಕಾಡು ವೇ? ಧರಿಸಿ ಸರ್ಕಾರದ ವಿರುದ್ಧ ವಿಭಿನ್ನ ಹೋರಾಟ ನಡೆಸುತ್ತೇವೆ. ಬಿಜೆಪಿ ಪಕ್ಷಕ್ಕೆ ನಾವೇ ಯಮ ಎಂದು ತೋರಿಸಲು ಕೋಣದ ಜೊತೆಗೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ದಸಂಸ ಜಿಲ್ಲಾಧ್ಯಕ್ಷ ವಾಯ್ ಸಿ. ಮಯೂರ್ ಮಾತನಾಡಿ, ಒಂದು ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲು ೫ ಬಾರಿ ಸುತ್ತೋಲೆ ಹೊರಡಿಸುವ ಸರ್ಕಾರಕ್ಕೆ ಸಂವಿಧಾನದ ಅರಿವು ಇಲ್ಲ. ಮುಖ್ಯಮಂತ್ರಿ ತಳವಾರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದರು.
ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷ ನಿಂಗಣ್ಣ ಬಿರಾದಾರ, ಅಲೋಕ ರೊಡಗಿ, ಅನೀಲ ಜೆರಟಗಿ, ಸಾಗರ ಜೆರಟಗಿ, ಭಾಗಣ್ಣ ಕೆಂಬಾವಿ ಮತ್ತಿತರು ಉಪಸ್ಥಿತರಿದ್ದರು.

 

The Daily News Media

The Daily News Media