ಸಹಕಾರ ಚಳವಳಿಯ ಉಳಿವು ಅಗತ್ಯ

ದಿ ಡೈಲಿ ನ್ಯೂಸ್ ಪಾಂಡವಪುರ
ಸಾರ್ವಜನಿಕ ಬದುಕಿನಲ್ಲಿದ್ದುಕೊಂಡು ಒಳ್ಳೇಯ ಕೆಲಸ ಮಾಡುವುದು ಕಷ್ಟದ ಕೆಲಸ ಎಂದು ವಾಗ್ಮಿ ಪ್ರೋ.ಎಂ.ಕೃಷ್ಣೇಗೌಡ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶಂಭೂನಹಳ್ಳಿ ಗುರುಸ್ವಾಮಿ ಅವರಿಗೆ ಪೌರಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಕ್ಷೇತ್ರದಲ್ಲಿದ್ದುಕೊಂಡು ಒಳ್ಳೇಯವರು ಎಂದು ಕರೆಯಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಅವರ ನಿಸ್ವಾರ್ಥ ಸೇವೆ ತಾಲೂಕಿಗೆ ಗೌರವ ತಂದುಕೊಟ್ಟಿದೆ ಎಂದರು.
ಸರ್ಕಾರಕ್ಕೆ ಸಮನಾಂತರವಾಗಿ ಜನರ ಒಡೆತನದ ಸಹಕಾರ ಚಳುವಳಿ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಆಶಿಸಿದ್ದರು. ಪ್ರಪಂಚದ ಮಹಾಯದ್ಧದ ಬಳಿಕ ಉಂಟಾಗಿದ್ದ ಹಲವು ಸಮಸ್ಯೆಗಳಿಗೆ ಸಹಕಾರ ಕ್ಷೇತ್ರ ಪರಿಹಾರ ಒದಗಿಸಿತ್ತು. ಹೀಗಾಗಿ ಸಹಕಾರ ಕ್ಷೇತ್ರ ಉಳಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗುವುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ನಿರ್ದೇಶಕ ಚೆಲುವರಾಜು, ಜಿಲ್ಲಾ ವ್ಯವಸ್ಥಾಪಕ ಶಶಿಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾಚಂದು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಪಿಎಸಿಎಸ್ ಅಧ್ಯಕ್ಷ ಎಚ್.ಸಿ.ಮಹೇಶ್, ಕಣಿವೆ ಯೋಗೇಶ್, ನೆಲ್ಲಿಗೆರೆ ಬಾಲು, ಪಿ.ಎಸ್.ಲಿಂಗರಾಜು, ವಿ.ಎಸ್.ನಿಂಗೇಗೌಡ, ವೈರಮುಡಿಗೌಡ ಇತರರು ಇದ್ದರು.

The Daily News Media

The Daily News Media