ಮೇಲುಕೋಟೆ ಚೆಲುವನಾರಯಣಸ್ವಾಮಿ ದೇಗುಲದ ನಾಲ್ಕನೇ ಸ್ಥಾನಿಕ ಶ್ರೀನಿವಾಸನ್ ಗುರೂಜಿ ಹೇಳಿಕೆ

ದಿ ಡೈಲಿನ್ಯೂಸ್ ಪಾಂಡವಪುರ
ವೇದ-ಶಾಸ್ತ್ರಗಳು ಯಾರು ಯಾವ ಕೆಲಸ ಮಾಡಬೇಕೆಂಬುದನ್ನು ತಿಳಿಸಿವೆ. ಅದರ ಆಧಾರದ ಮೇಲೆ ವಿಗ್ರಹ ಕೆತ್ತನೆ ವಿಚಾರವನ್ನು ಪ್ರಸ್ತಾಪಿಸಿದ್ದೇನೇ ಹೊರತು ಬೇರ್‍ಯಾವ ಉದ್ದೇಶದಿಂದಲ್ಲ ಎಂದು ಧಾರ್ಮಿಕ ತಜ್ಞ ಹಾಗೂ ಮೇಲುಕೋಟೆ ಚೆಲುವನಾರಯಣಸ್ವಾಮಿ ದೇಗುಲದ ನಾಲ್ಕನೇ ಸ್ಥಾನಿಕ ಶ್ರೀನಿವಾಸನ್ ಗುರೂಜಿ ಹೇಳಿದ್ದು, ಕಳೆದೆರಡು ದಿನಗಳ ಹಿಂದೆ ವಿಗ್ರಹ ಕೆತ್ತನೆ ವಿಚಾರವಾಗಿ ತಾವು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆಗಮನ ಶಾಸ್ತ್ರ, ಶಿಲ್ಪ ಶಾಸ್ತ್ರಗಳು ವಿಗ್ರಹ ಕೆತ್ತನೆ ಯಾರು ಮಾಡಬೇಕು ಎಂದು ತಿಳಿಸಿದೆ. ಬ್ರಾಹ್ಮಣರು ಪೂಜೆ ಮಾಡಬೇಕು. ವಿಶ್ವಕರ್ಮ ಜನಾಂಗ ವಿಗ್ರಹ ಕೆತ್ತೆನೆ ಮಾಡಬೇಕು. ಹೀಗೆ ಪ್ರತಿಯೊಂದನ್ನು ಶಾಸ್ತ್ರಗಳು ತಿಳಿಸಿದೆ. ನಾನು ಯಾರ ವಿರುದ್ಧವೂ ಇಲ್ಲಿ ಮಾತನಾಡುತ್ತಿಲ್ಲ. ಯಾವುದೇ ರಾಜಕೀಯ ಉದ್ದೇಶ ಅಥವಾ ಮುಸ್ಲಿಮರ ಮೇಲಿನ ದ್ವೇಷದಿಂದಾಗಲಿ ಅಥವಾ ಅವರ ವ್ಯಾಪಾರಕ್ಕಾಗಲಿ ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದಿದ್ದಾರೆ.
ಧರ್ಮ ಏನು ಹೇಳಿದೆಯೋ ಅದನ್ನು ಮಾತ್ರ ನನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದೇನೆ. ಈ ವಿಚಾರ ಮುಂದಿಟ್ಟುಕೊಂಡು ರಾಜ್ಯದ ಕೆಲವು ನಾಯಕರು ದೂಷಣೆ ಮಾಡುತ್ತಿರುವುದು ಸರಿಯಲ್ಲ ಸಾಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕಾದರೆ ಸರ್ಕಾರದ ನೇತಾರರಾಗಲೀ, ಇನ್ನಿತರ ನಾಯಕರಾಗಲಿ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣಬೇಕು. ಹಿಂದೂ ಧರ್ಮದಲ್ಲಿ ಮಾತ್ರ ಸಮಾನತೆ ಕಾಣಬಹುದಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಬಿಜೆಪಿ ಮುಖಂಡರಾದ ಡಾ.ಇಂದ್ರೇಶ್, ಡಾ.ಎನ್.ಎಸ್.ಇಂದ್ರೇಶ್, ಎಸ್‌ಎನ್‌ಟಿ ಸೋಮಶೇಖರ್, ಬಳಘಟ್ಟ ಅಶೋಕ್, ಬಿಜೆಪಿ ತಾಲೂಕು ಪುರುಷೋತ್ತಮ್, ಚಿಕ್ಕಮರಳಿ ನವೀನ್, ಶಂಕರ್, ಪುರಸಭೆ ಸದಸ್ಯ ನರಸಿಂಹಚಾರಿ ಇತರರು ಇದ್ದರು.

 

 

 

The Daily News Media

The Daily News Media