ಶ್ರೀರಾಮನ ಆದರ್ಶಗಳು ದಾರಿದೀಪ

ದಿ ಡೈಲಿ ನ್ಯೂಸ್ ಸಿರವಾರ
ಹಿಂದೂ ಧರ್ಮದಲ್ಲಿ ಶ್ರೀರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಶ್ರೀರಾಮ ಪುರಾಣಕಾಲದ ಪುಣ್ಯಪುರುಷ, ತಂದೆತಾಯಿಗಳ ಆಜ್ಞಾಧಾರಕ ಪುತ್ರನಾಗಿ, ಸತಿಗೆ ತಕ್ಕ ಆದರ್ಶಪತಿಯಾಗಿ, ಸಾಮ್ರಾಜ್ಯದ ದಕ್ಷ ರಾಜನಾಗಿ ರಾಜ್ಯಭಾರ ಮಾಡಿದನು ಎಂದು ಯುವ ಬಳಗದ ಮಾರ್ಗದರ್ಶಕ ಸಿದ್ಧರಾಮೇಶ್ವರ ಪತ್ತಾರ ಹೇಳಿದರು.
ಪಟ್ಟಣದ ಶ್ರೀರಾಮ ನಗರದಲ್ಲಿ ಹಮ್ಮಿಕೊಂಡ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಯುವಕರಿಗೆ ಕರೆ ನೀಡಿದರು.
ಸಿದ್ದಯ್ಯ ಸ್ವಾಮಿ, ಶರಣಪ್ಪ ಬಡಿಗೇರ, ರಾಜಶೇಖರ ಕುಂಬಾರ, ಶಿಕ್ಷಕ ಬಸವರಾಜ ಕುಂಬಾರ, ಕಾಳಪ್ಪ ಬಡಿಗೇರ, ಸೋಮಶೇಖರ ಕುಂಬಾರ, ಶ್ರೀಕಾಂತ್ ಸ್ವಾಮಿ, ಕಾಳಪ್ಪ ಕಂಬಾರ, ಸೇರಿದಂತೆ ಮಕ್ಕಳು ಯುವಕರು ಭಾಗವಹಿಸಿದ್ದರು.

 

The Daily News Media

The Daily News Media