ರಾಸಾಯನಿಕದಿಂದ ಫಲವತತ್ತೆ ಇಳಿಕೆ

ದಿ ಡೈಲಿ ನ್ಯೂಸ್ ವಿಜಯಪುರ
ಮಣ್ಣು, ನೀರು, ಗಾಳಿ ಸೇರಿದಂತೆ ಪಂಚಭೂತಗಳಿಂದ ಕೂಡಿದ ಈ ಪ್ರಕೃತಿ ಲಕ್ಷಾಂತರ ವರ್ಷಗಳಿಂದ ಇದ್ದು, ಮುಂದಿನ ಪೀಳಿಗೆಗಳಿಗೆವರೆಗೆ ನಾವು ರಕ್ಷಿಸಬೇಕು ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಹೇಳಿದರು.
ಇಶಾ ಫೌಂಡೇಶನ್ ‘ಮಣ್ಣು ಉಳಿಸಿ’ ಅಭಿಯಾನ ಅಂಗವಾಗಿ ವಿಜಯಪುರ ನಗರದಲಿ ಸೈಕಲ್‌ಜಾಥಾ ನಡೆಸಿ, ನಂತರಗಾಂಧಿ ವೃತ್ತದ ಸಭೆಯಲ್ಲಿ ಮಾತನಾಡಿದ ಅವರು, ಮಣ್ಣು ಪವಿತ್ರ. ಮನುಷ್ಯನ ಆಹಾರ ಉತ್ಪಾದನೆಯ ಮೂಲ. ಫಲವತ್ತಾಗಿಯೇ ಇದ್ದ ಮಣ್ಣನ್ನು ನಾವು ಹಲವು ರಾಸಾಯನಿಕಗಳನ್ನು ಬಳಸಿ, ಹಾಳುಗೆಡುವಿದ್ದೇವೆ. ಇದರಿಂದ ಮಣ್ಣು ಕಲುಷಿತಗೊಂಡು, ಬೆಳೆಗಳು ವಿಷಯುಕ್ತಗೊಂಡು, ಕ್ಯಾನ್ಸರ್‌ನಂತಹ ಕಾಯಿಲೆಗಳು ಹೆಚ್ಚುತ್ತಿವೆ. ನೀರಾವರಿ ಹೆಚ್ಚಿದಂತೆಲ್ಲ ಅತೀ ನೀರಿನ ಬಳಕೆಯಿಂದ ಮಣ್ಣಿನ ಫಲವತ್ತತೆ ಕಳೆದು, ಮಣ್ಣಿನಕ್ಷಾರ ಹೆಚ್ಚುತ್ತಿದೆ. ಅಗವಿದ್ದಾಗ ಮಾತ್ರ ನೀರು ಬಳಸಬೇಕು ಎಂದರು.
ಸದ್ಯ ಪುಣೆಯಲ್ಲಿ ನೆಲೆಸಿರುವ ಸಾಗರ ಅವರು ವೃತ್ತಿಯಲ್ಲಿ ಮರಿನ್ ಎಂಜಿನಿಯರ್ ಆಗಿರುವ ಇವರು ಕೊಯಮುತ್ತೂರ್‌ನಿಂದ ಪುಣೆಯವರೆಗೆ ೧೫೦೦ ಕಿ.ಮೀ ಸೈಕಲ್ ಜಾಗೃತಿ ಜಾಥಾ ನಡೆಸಿದ್ದು, ಇದೇ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.
ಇಶಾ ಫೌಂಡೇಶನ್‌ನ ಬಸವರಾಜ ಗುರುಜಿ ಬಿರಾದಾರ, ಸೈಕ್ಲಿಂಗ್ ಗ್ರುಪ್‌ನ ಶಿವನಗೌಡ ಪಾಟೀಲ, ಸೋಮಶೇಖ ಸ್ವಾಮಿ, ಶಿವರಾಜ ಪಾಟೀಲ, ಸೋಮು ಮಠ, ಸಮೀರ ಬಳಗಾರ, ಸಂದೀಪ ಮಡಗೊಂಡ, ಡಿ.ಕೆ.ತಾವಸೆ ಉಪಸ್ಥಿತರಿದ್ದರು.
ಪ್ರಗತಿಪರ ರೈತ ಎಸ್.ಟಿ ಪಾಟೀಲ ಮಣ್ಣಿನಕುರಿತು ಗೀತೆ ಹಾಡಿದರು. ಬೆಳಿಗ್ಗೆ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸೈಕಲ್ ಜಾಥಾ ನಗರದ ಪ್ರಮುಖ ನಗರಗಳಲ್ಲಿ ಸಂಚರಿಸಿ, ಗಾಂಧಿವೃತ್ತದಲ್ಲಿ ಮುಕ್ತಾಯಗೊಂಡಿತು.

The Daily News Media

The Daily News Media