ಮತದಾರರ ಪಟ್ಟಿ ಪರಿಷ್ಕರಣೆ ಚುರುಕು

ದಿ ಡೈಲಿ ನ್ಯೂಸ್ ಗುರುಮಠಕಲ್
ಚುನಾವಣೆ ಶಾಖೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿ?ರಣೆ- ಎಲ್ಲಾ ಫಾರಂ ಮತ್ತು ಜೊತೆಗೆ ಪೋಟೋ ಸಿಮಿಲರ್ ಎಂಟ್ರಿ, ಡೆಮೊಗ್ರಾಫಿಕ್ ಸಿಮಿಲರ್ ಎಂಟ್ರಿ ಹಾಗೂ ಯುವ ಮತದಾರರ ನೋಂದಣಿಗಾಗಿ ಮನೆ-ಮನೆ ಸರ್ವೆ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸೂಚಿಸಿದರು.
ಗುರುಮಠಕಲ್ ಪುರಸಭೆ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿ ಪರಿ?ರಣೆ ನೋಂದಣಿ ತರಬೇತಿ ಮತ್ತು ವಿಶ್ಲೇ?ಣೆ ಕಾರ್ಯಕ್ರಮ ಸಭೆ ಮತ್ತು ತಾಲೂಕಿನ ಬೂದೂರು ಗ್ರಾಮ ಮತ್ತು ನಗರದಲ್ಲಿನ ಕಂದೂರು ಓಣಿ, ಮಜ್ಜಿಗೇರಿ, ಕಟೇಲಗೇರಿ ಓಣಿಗಳಿಗೆ ಖುದ್ದಾಗಿ ಭೇಟಿ ನೀಡಿ ಮತದಾರರ ಪಟ್ಟಿ ಪರಿ?ರಣೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕೆಳಹಂತದಲ್ಲಿ ಬಿಎಲ್‌ಒ, ಮೇಲ್ವಿಚಾರಕರು, ಚುನಾವಣಾ ಶಾಖೆಯ ಸಿಬ್ಬಂದಿ ತಮ್ಮ ಮತಗಟ್ಟೆಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳನ್ನು ಸಲ್ಲಿಸದೇ ಇರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.
ಜನನ ಪ್ರಮಾಣಪತ್ರ, ಹೆಸರು ನೋಂದಣಿ, ವಯಸ್ಸಿನ ದೃಢೀಕರಣ, ಪಡಿತರ ಚೀಟಿಗಳನ್ನು ಪರಿಶೀಲಿಸಿ ೧೮ ವ? ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಗುರುಮಿಠಕಲ್ ತಹಸೀಲ್ದಾರ ಶರಣಬಸವ, ಚುನಾವಣೆ ತಹಸೀಲ್ದಾರ ಸಂತೋ?ರಾಣಿ, ಗ್ರೇಡ್- ೨ ತಹಸೀಲ್ದಾರ ನರಸಿಂಹಸ್ವಾಮಿ ಇತರರು ಉಪಸ್ಥಿತರಿದ್ದರು

 

The Daily News Media

The Daily News Media