ವೃತ್ತಿ, ಪ್ರವೃತ್ತಿಯಲ್ಲೂ ಪರಿಪೂರ್ಣ ಶಿಕ್ಷಕ

ದಿ ಡೈಲಿ ನ್ಯೂಸ್ ಸಿಂದಗಿ
ಬಿ.ಪಿ. ಕರ್ಜಗಿರವರು ಶಿಕ್ಷಣ ಕ್ಷೇತ್ರದಲ್ಲಿ ೨೮ ಕಾಲ ವ?ಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಲಕ್ಷಾಂತರ ವಿದ್ಯಾರ್ಥಿಗಳ ಗುರು ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು
ನಗರದ ಆಲಮೇಲ ರಸ್ತೆಯಲ್ಲಿರುವ ಪಿಇಎಸ್ ಕಾಲೇಜು ಆವರಣದಲ್ಲಿ ನಡೆದ ಬಿ.ಪಿ. ಕರ್ಜಗಿ ಅವರ ಅಮೃತ ಅಭಿನಂದನಾ ಮಹೋತ್ಸವ ಮತ್ತು ವಿಶ್ರಾಂತ ಗ್ರಂಥ ಬಿಡುಗಡೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ಜಗಿಯವರು ನಿವೃತ್ತಿಯ ಜೀವನವನ್ನು ಸಹ ಶೈಕ್ಷಣಿಕ ರಂಗಕ್ಕೆ ಮೀಸಲಿಟ್ಟು ಅವಿಶ್ರಾಂತ ಪ್ರಾಧ್ಯಾಪಕ ಎಂದು ಹೆಸರು ವಾಸಿಯಾಗಿದ್ದಾರೆ. ಕರ್ಜಗಿರವರ ಆದರ್ಶ, ಕುಟುಂಬದ ಒಗ್ಗಟ್ಟು ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಹೇಳಿದರು. ಅವಿಶ್ರಾಂತ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಕರ್ಜಗಿಯವರು ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ನಿವೃತ್ತಿಯಾಗಿಲ್ಲ ಎಂದು ಹೇಳಿದರು.
ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಿಂದಗಿ ಶಾಸಕ ರಮೇಶ ಭೂಸನೂರ, ಬೈಲಹೊಂಗಲ ಶಾಸಕ ಮಾಹಂತೇಶ ಕೌಜಲಗಿ, ವಿ .ಪ ಸದಸ್ಯ ಅರುಣ ಶಹಾಪೂರ ಮಾತನಾಡಿದರು. ಮಹೇಶ ಕರ್ಜಗಿ ಪ್ರಾಸ್ತಾವಿಕ ನುಡಿ ಹೇಳಿದರು. ಸಾನ್ನಿಧ್ಯ ವಹಿಸಿದ್ದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಕೆಎಎಸ್ ಅಧಿಕಾರಿ ಸಿದ್ರಾಮಪ್ಪ ಎಸ್ ಬಿರಾದಾರ, ಬಿ.ಪಿ ಕರ್ಜಗಿ ದಂಪತಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

 

The Daily News Media

The Daily News Media