ಮೈಸೂರು ಸಿಟಿ ಆಫ್ ಯೋಗ: ಪ್ರತಾಪ್ ಸಿಂಹ

ದಿ ಡೈಲಿ ನ್ಯೂಸ್ ಮೈಸೂರು
ಜಗತ್ತಿಗೆ ಅತಿ ಹೆಚ್ಚು ಯೋಗ ತರಬೇತುದಾರರನ್ನು ನೀಡಿದ ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಭಾರತ ಸರ್ಕಾರದ ಆಯು? ಮಂತ್ರಾಲಯ, ಜಿಲ್ಲಾ ಆಯು? ಕಚೇರಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಸರ್ಕಾರಿ ಯೋಗ ಮಹಾವಿದ್ಯಾಲಯ, ವೇದವ್ಯಾಸ ಯೋಗ ಪ್ರತಿ?ನ ಜೆಎಸ್‌ಎಸ್ ವಿದ್ಯಾಪೀಠ ಹಾಗೂ ಯೋಗ ಫೆಡರೇಶನ್ ಆಫ್ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯೋಗೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಅವರು ಮಾತನಾಡಿದರು.
ಯುವಕರಿಗೆ ಯೋಗದ ಬಗ್ಗೆ ಅರಿವನ್ನು ಮೂಡಿಸಿ ಯೋಗದ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ೨೦೧೯ರಲ್ಲಿ ೧೯೭ ರಾಷ್ಟ್ರಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು ಇದು ಒಂದು ದಾಖಲೆಯಾಯಿತು ಎಂದು ತಿಳಿಸಿದರು.
ಮೂಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೇಯರ್ ಸುನಂದಾ ಪಾಲನೇತ್ರ, ಡಾ.ಕೆ.ರಾಘವೇಂದ್ರ ಪೈ,ಡಾ.ಚಂದ್ರಶೇಖರ್, ಡಾ.ಎಂ.ವಿ.ಶ್ರೀಧರ್, ಡಾ.ಸೀತಾಲಕ್ಷ್ಮಿ, ಶ್ರೀಹರಿ ದ್ವಾರಕನಾಥ, ಶಶಿಕುಮಾರ್, ಗೋಪಾಲಕೃ?, ಡಾ.ಪಿ.ಎನ್.ಗಣೇಶ್ ಕುಮಾರ್, ಡಾ.ಬಿ.ಪಿ.ಮೂರ್ತಿ ಸೇರಿದಂತೆ ಹಲವರಿದ್ದರು.

The Daily News Media

The Daily News Media