ರಥೋತ್ಸವ ಹಿನ್ನಲೆಯಲ್ಲಿ ಕಾರ್ಯಯೋಜನೆ

ದಿ ಡೈಲಿ ನ್ಯೂಸ್ ಬೇಲೂರು
ವಿಶ್ವ ಪ್ರಸಿದ್ಧ ಶ್ರೀಚನ್ನಕೇಶವಸ್ವಾಮಿ ದೇವರ ರಥೋತ್ಸವದ ಹಿನ್ನಲೆಯಲ್ಲಿ ಬರುವ ಪ್ರವಾಸಿಗರು ಹಾಗೂ ಭಕ್ತರ ಅನುಕೂಲಕ್ಕಾಗಿ ಹಲವು ಕಾರ್ಯಯೋಜನೆಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪುರಸಭಾಧ್ಯಕ್ಷ ಸಿ.ಎನ್.ದಾನಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.೧೩ ಹಾಗೂ ೧೪ ರಂದು ಎರಡು ದಿನ ರಥೋತ್ಸವ ನಡೆಯಲಿದ್ದು ಕೋವಿಡ್ ಹಿನ್ನಲೆಯಲ್ಲಿ ೨ ವರ್ಷ ಸ್ಥಗಿತಗೊಂಡಿದ್ದ ರಥೋತ್ಸವ ವೀಕ್ಷಣೆಗೆ ಈ ವರ್ಷ ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆಯಿದೆ. ಅದಕ್ಕಾಗಿ ಪಟ್ಟಣವನ್ನು ತಳಿರುತೋರಣಗಳಿಂದ ಅಲಂಕರಿಸಲಾಗುವುದು. ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಸಂಕೀರ್ಣಕ್ಕೆ ವರ್ತಕರೊಂದಿಗೆ ಚರ್ಚಿಸಿ ವಿದ್ಯುತ್ ಅಲಂಕಾರ ಮಾಡಿಸಲಾಗುವುದು. ೬ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಬಸವೇಶ್ವರ ವೃತ್ತ, ಕೆಂಪೇಗೌಡರ ವೃತ್ತ, ನೆಹರೂನಗರದಲ್ಲಿರುವ ಹೈಮಾಸ್ಟ್ ಬಲ್ಭ್ ಬದಲಾವಣೆ ಮಾಡಿ ಆಧುನಿಕ ಬಲ್ಭ್‌ಗಳ ಅಳವಡಿಸಲಾಗುವುದು.
ದೇವಾಲಯದ ಆವರಣ ಹಾಗೂ ಮುಖ್ಯರಸ್ತೆ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಲಾಗುವುದು. ನಿಗದಿತ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮಾಡಲಾಗುವುದು. ದೇವಾಲಯದ ಮುಂಭಾಗವಿರುವ ಪುರಾತತ್ವ ಇಲಾಖೆಯ ಶೌಚಾಲಯಕ್ಕೆ ಬೀಗ ಹಾಕಿರುವುದನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಮುಖ್ಯಾಧಿಕಾರಿ ಸುಜಯಕುಮಾರ್ ಇದ್ದರು.

 

The Daily News Media

The Daily News Media