ರಾಜಕೀಯ ಕಾರಣಕ್ಕೆ ಪ್ರತಿಭಟನೆ: ಆರೋಪ

ದಿ ಡೈಲಿ ನ್ಯೂಸ್ ಪಾಂಡವಪುರ
ತಾಲೂಕಿನ ಕನಗನಮರಡಿ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ನಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ. ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕಾರಣಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಗಣಿಗಾರಿಕೆ ಸುತ್ತಲಿನ ಗ್ರಾಮಗಳ ರೈತರು ಆರೋಪಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಈ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಆಗ ಯಾರೂ ಗಣಿಗಾರಿಕೆ ಬಗ್ಗೆ ಚಕರ ಎತ್ತಿಲ್ಲ. ತಮ್ಮ ಸ್ವಹಿತಾಸಕ್ತಿಗಾಗಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಯಾರೊಬ್ಬರು ಈ ಭಾಗದಲ್ಲಿ ಒಂದು ಗುಂಟೆ ಜಮೀನು ಹೊಂದಿಲ್ಲ. ಗಣಿಗಾರಿಕೆಯಿಂದ ಬೆಳೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಚಿಕ್ಕಬ್ಯಾಡರಹಳ್ಳಿ, ತಿರುಮಲಪುರ ಹಾಗೂ ತಿಮ್ಮನಕೊಪ್ಪಲು ಗ್ರಾಮದ ರೈತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೋವಿಡ್ ಸಂಕಷ್ಟ ಸಮಯದ ನಂತರ ಗ್ರಾಮಗಳ ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ಗಣಿಗಾರಿಕೆ ಯುವಕರಿಗೆ ಆಸರೆಯಾಗಿದೆ ಎಂದರು.
೪.೫ ಕೋಟಿ ರಾಯಲ್ಟಿ : ಗಣಿಗಾರಿಕೆ ನಡೆಸಲು ವಾರ್ಷಿಕವಾಗಿ ಸರ್ಕಾರಕ್ಕೆ ೪.೫ ಕೋಟಿ ರೂ. ರಾಜಧನ ಪಾವತಿಸಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ ಸೇರಿದಂತೆ ಸಮಬಂಧಪಟ್ಟ ಎಲ್ಲಾ ಇಲಾಖೆಯಿಂದ ಅನುಮತಿ ಕೂಡ ಪಡೆಯಲಾಗಿದೆ. ಕೆಲ ರಾಜಕೀಯ ನಾಯಕರ ಪ್ರೇರೆಪಣೆಯಿಂದ ಪ್ರತಿಭಟನೆ ನಡೆಯುತ್ತಿದೆ. ಇದೇ ರೀತಿ ತೊಂದರೆ ಕೊಟ್ಟರೆ ಕಾನೂನಿನ ಮೋರೆ ಹೋಗಬೇಕಾಗುತ್ತದೆ ಎಂದು ಗಣಿ ಮಾಲೀಕ ಅಶೋಕ್ ಪಾಟೀಲ್ ಎಚ್ಚರಿಸಿದರು.
ಗೋಷ್ಠಿಯಲ್ಲಿ ರೈತರಾದ ವಿಜಯಕುಮಾರ್, ಬೊಮ್ಮೇಗೌಡ, ಅಶೋಕ್, ತಿರುಮಲಪುರ ಶಶಿಧರ್, ಮಲ್ಲೇಶ್, ತಿಮ್ಮನಕೊಪ್ಪಲು ಪೃಥ್ವಿ, ಪವನ್, ಶರತ್, ಪ್ರಶಾಂತ್ ಇತರರು ಇದ್ದರು.
ಚಿತ್ರ: ೬-ಪಿಎನ್‌ಪಿ ೨

The Daily News Media

The Daily News Media