ಬಂಡಿಪುರ ಹುಲಿಸಂರಕ್ಷಿತ ಪ್ರದೇಶ ಅಭಿವೃದ್ದಿಗೆ ಕ್ರಮ

ದಿ ಡೈಲಿ ನ್ಯೂಸ್ ಚಾಮರಾಜನಗರ
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಹೆಚ್ಚು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಹಾಗೂ ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ವಿ.ಕತ್ತಿ ತಿಳಿಸಿದರು.
ಗುಂಡ್ಲುಪೇಟೆ ತಾಲೂಕಿನ ಬಂಡಿಪುರದಲ್ಲಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಂಡೀಪುರ ಅರಣ್ಯದಲ್ಲಿ ಅಭಿವೃದ್ದಿ ಕೆಲಸಗಳಾದ ಚೆಕ್ ಡ್ಯಾಂ ನಿರ್ಮಾಣ, ಲಾಂಟಾನ ತೆರವು ಸೇರಿದಂತೆ ಇತರೆ ಕಾರ್ಯಗಳು ಪ್ರಗತಿಯಲ್ಲಿವೆ. ಇವುಗಳನ್ನು ಪರಿಶೀಲಿಸಿದ್ದೇನೆ. ಕೊರೊನಾ ಇದ್ದ ಕಾರಣ ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಬೂದಿಪಡಗದಲ್ಲಿ ಆನೆಶಿಬಿರ ನಿರ್ಮಾಣ ಸಾಧ್ಯವಾಗಿರಲಿಲ್ಲ ಎಂದರು.
ನಂತರ ಸಚಿವರು ರಾಂಪುರ ಆನೆಶಿಬಿರಕ್ಕೆ ತೆರಳಿ ಪರಿಶೀಲಿಸಿದರು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮಲ್ಲೇಶಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ರಾಮೇಶ್ವರಪ್ಪ, ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ರಮೇಶ್‌ಕುಮಾರ್, ಎಸಿಎಫ್ ಕೆ.ಪರಮೇಶ್, ಡಿಸಿಎಫ್ ಮಾಲತಿ ಪ್ರಿಯಾ ಮತ್ತಿತರರಿದ್ದರು.

 

The Daily News Media

The Daily News Media