ಯೋ‘ರಿಂದ ಆಕರ್ಷಕ ಪಥಸಂಚಲನ

ದಿ ಡೈಲಿ ನ್ಯೂಸ್ ವಿಜಯಪುರ
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಮೀಸಲು ಪಡೆಯ ಯೋ‘ರು ಹಾಗೂ ಪೊಲೀಸರ ಆಕರ್ಷಕ ಪಥಸಂಚಲನ ವಿಜಯಪುರ ನಗರದಲ್ಲಿ ಜರುಗಿತು.ಶುಕ್ರವಾರ ಸಂಜೆ ನಗರದ ಗಾಂಧಿವೃತ್ತದಲ್ಲಿ ಆರಂ‘ಗೊಂಡ ಪಥಸಂಚಲನಕ್ಕೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ನಗರದ ಗಾಂಧಿ ವೃತ್ತದಿಂದ ಆರಂ‘ಗೊಂಡ ಪಥಸಂಚಲನ ನಗರದ ಮೀನಾಕ್ಷಿ ಚೌಕ, ನೌಬಾಗ, ಹವೇಲಿ ಗಲ್ಲಿ, ಸಕಾರೋಜಾ, ಅಥಣಿ ಗಲ್ಲಿ, ಮುರಾಣಕೇರಿ ಕ್ರಾಸ್, ಕೆ.ಸಿ.ಮಾರ್ಕೆಟ್ ಮಾರ್ಗವಾಗಿ ಸಂಚರಿಸಿದ ಪಥ ಸಂಚಲನವು ಮತದಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಜಿಲ್ಲೆಯ ಮತದಾರರು ಯಾವುದೇ ಆಮಿಷಕ್ಕೊಳಗಾಗದೇ, ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬ ಅರ್ಹ ಮತದಾರರು ನಿರ್ಭಿತಿಯಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದು, ಯಾವುದೇ ಅರ್ಹ ಮತದಾರರ ಮತದಾನದಿಂದ ವಂಚಿತವಾಗದೇ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಅವರು ಕರೆ ನೀಡಿದ ಅವರು, ಜಿಲ್ಲೆಗೆ 5 ತುಕಡಿಗಳು ಬಂದಿದ್ದು, ವಿವಿ‘ ಮತಕ್ಷೇತ್ರಗಳಲ್ಲಿ ಇಂದು ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ ಅವರು ಮಾತನಾಡಿ, ಮತದಾರರು ಯಾವುದೇ ‘ಯಪಡದೇ ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಶಾಂತಿಯುತ ಮತದಾನ ನಡೆಸುವ ನಿಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಕಲ ವ್ಯವಸ್ಥೆ ಮಾಡಿಕೊಂಡು ಸನ್ನದ್ಧವಾಗಿದೆ. ಮುದ್ದೇಬಿಹಾಳ, ಬಬಲೇಶ್ವರ, ಸಿಂದಗಿ, ಹಾಗೂ ಇಂಡಿಯಲ್ಲೂ ಕೇಂದ್ರ ಮೀಸಲು ಪಡೆಗಳ ಮೂಲಕ ಇಂದು ರೂಟ್ ಮಾರ್ಚ್ ನಡೆಸಲಾಯಿತು ಎಂದು ಹೇಳಿದರು.

The Daily News Media

The Daily News Media