ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಜನ

ಮೂಲ‘ೂತ ಸೌಕರ್ಯ ಕಲ್ಪಿಸದಕ್ಕೆ ರೊಚ್ಚಿಗೆದ್ದಿರೋ ಎರಡು ಬಡಾವಣೆ ನಿವಾಸಿಗಳು

ದಿ ಡೈಲಿ ನ್ಯೂಸ್ ಕಲಬುರಗಿ
ರಾಜ್ಯ ವಿ‘ಾನಸ‘ೆ ಚುನಾವಣೆಗೆ ದಿನಾಂಕ ಘೋಷಣೆ ಆಗ್ತಿದ್ದಂತೆ, ಚುನಾವಣಾ ರಣಕಣ ರಂಗೇರುತ್ತಿದೆ. ಅ‘್ಯರ್ಥಿಗಳು ಮತದಾರರ ಮನವೊಲಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸ್ತಿದ್ದಾರೆ. ಆದರೆ ಕಲಬುರಗಿಯ ಎರಡು ಬಡಾವಣೆ ನಿವಾಸಿಗಳು ಮಾತ್ರ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಹತ್ತಾರು ಬಾರಿ ಕೇಳಿದರೂ ಮೂಲ‘ೂತ ಸೌಕರ್ಯ ಕಲ್ಪಿಸದಕ್ಕೆ ರೊಚ್ಚಿಗೆದ್ದಿರೋ ಎರಡು ಬಡಾವಣೆ ಮತದಾರರು ಮತದಾನ ಬಹಿಷ್ಕಾರ ಮಾಡಿ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ನಿ‘ರ್ರಿಸಿದ್ದಾರೆ. ಮಹಾನಗರದಲ್ಲಿದ್ದರೂ ರಸ್ತೆ, ಒಳಚರಂಡಿ ಕಾಣದ ಬಡಾವಣೆ. ಜನಪ್ರತಿನಿಧಿಗಳ, ಅಧಿಕಾರಿಗಳ ವಿರು‘್ಧ ಕಿಡಿಕಾರುತ್ತಿರುವ ನಿವಾಸಿಗಳು. ಚುನಾವಣೆ ಬಹಿಷ್ಕಾರ ಮಾಡೋದಾಗಿ ನಿ‘ರ್ರಿಸಿರೋ ಮತದಾರರು. ಮೂಲ‘ೂತ ಸೌಕರ್ಯಗಳನ್ನ ಕಲ್ಪಿಸದೆ ಇರೋದಕ್ಕೆ ಚುನಾವಣೆ ಬಹಿಷ್ಕಾರಕ್ಕೆ ಕಲಬುರಗಿ ಮತದಾರರು ಮುಂದಾಗಿದ್ದಾರೆ. ಕಲಬುರಗಿ ಮಹಾನಗರದ ಲಕ್ಷ್ಮೀ ನಗರ ಮತ್ತು ಜ್ಞಾನಗಂಗಾ ಕಾಲೋನಿಯ ಎರಡು ಬಡಾವಣೆ ನಿವಾಸಿಗಳು ಈ ಬಾರಿ ವಿ‘ಾನಸ‘ೆ ಚುನಾವಣೆಗೆ ಬಹಿಷ್ಕಾರ ಮಾಡಲು ನಿ‘ರ್ರಿಸಿದ್ದಾರೆ. ಅಂದಹಾಗೆ ಈ ಎರಡು ಬಡಾವಣೆಗಳು ಹುಟ್ಟಿಕೊಂಡು ಬರೋಬ್ಬರಿ ಇಪ್ಪತ್ತು ವಷರ್ಗಳು ಕಳೆದಿವೆ. ಆದ್ರು ಚುನಾಯಿತ ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಚರಂಡಿ, ಕುಡಿಯುವ ನೀರಿನ ಸೌಲ‘್ಯ ಸೇರಿದಂತೆ ಕನಿಷ್ಠ ಮೂಲ‘ೂತ ಸೌಲ‘್ಯಗಳನ್ನು ಕಲ್ಪಿಸಿಲ್ಲ. ಬಡಾವಣೆಗಳನ್ನ ಕಡೆಗಣಿಸಿರುವ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಎರಡು ಬಡಾವಣೆ ಮತದಾರರು ಚುನಾವಣೆ ಬಹಿಷ್ಕಾರಕ್ಕೆ ನಿ‘ರ್ರಿಸಿದ್ದಾರೆ. ಲಕ್ಷ್ಮೀ ನಗರ ಮತ್ತು ಜ್ಞಾನಗಂಗಾ ಕಾಲೋನಿಯಲ್ಲಿ ನೂರಾರು ಮನೆಗಳಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೆ ಬರುವ ಎರಡು ಬಡಾವಣೆಗಳಿಗೆ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಸಂಪೂರ್ಣ ಕಡೆಗಣಿಸಿದ್ದಾರೆ. ಕನಿಷ್ಠ ಮೂಲ‘ೂತ ಸೌಲ‘್ಯಗಳನ್ನ ಕಲ್ಪಿಸುವಂತೆ ಶಾಸಕ ಬಸವರಾಜ ಮತ್ತಿಮೂಡ್, ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಸಚಿವ ‘ೈರತಿ ಬಸವರಾಜ, ಸಂಸದ ಉಮೇಶ್ ಜಾ‘ವ್, ಕೆಕೆಆರ್ ಡಿಬಿ ಅ‘್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಸಿಎಂ ಬೊಮ್ಮಾಯಿ, ಪ್ರ‘ಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ಮನವಿ ಮಾಡಿದ್ದಾರೆ. ಮೂಲ‘ೂತ ಸೌಕರ್ಯಗಳಿಲ್ಲದೆ ಮಳೆಗಾಲದಲ್ಲಿ ಓಡಾಡಲು ಎರಡು ಬಡಾವಣೆ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕನಿಷ್ಠ ಸೌಲ‘್ಯಗಳನ್ನ ಕಲ್ಪಿಸದ ಜನಪ್ರತಿನಿಧಿಗಳಿಗೆ ಯಾಕೆ ಮತಹಾಕಬೇಕು? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು. ಕಡ್ಡಾಯ ಮತದಾನಕ್ಕಾಗಿ ಚುನಾವಣಾ ಆಯೋಗ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಈ ಎರಡು ಬಡಾವಣೆ ನಿವಾಸಿಗಳು ಮಾತ್ರ ಮೂಲ‘ೂತ ಸೌಲ‘್ಯಗಳನ್ನು ಕಲ್ಪಿಸದೆ ಇರುವುದಕ್ಕೆ ಚುನಾವಣೆ ಬಹಿಷ್ಕಾರಕ್ಕೆ ನಿ‘ರ್ರಿಸಿದ್ದಾರೆ. ಚುನಾವಣಾ ಅಧಿಕಾರಿಗಳು ಎರಡು ಬಡಾವಣೆ ಮತದಾರರ ಮನವೊಲಿಸಲು ಮುಂದಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

45 ಪತ್ರ ಬರೆದರೂ ಸ್ಪಂದನೆಯಿಲ್ಲ: 
ಸಂಬಂಧಿಸಿದವರಿಗೆ ಬರೋಬ್ಬರಿ 45 ಪತ್ರಗಳನ್ನು ಬರೆದು ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಸಾಲದಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿ‘ಟನೆ ನಡೆಸಿದ್ದಾರೆ. ಆದ್ರು ಯಾರೋಬ್ಬರ ಇವರ ಸಮಸ್ಯೆಗಳಿಗೆ ಸ್ಪಂದಿಸದೇ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಮಂತ್ರಿಗಳಿಗೆ, ಸಿಎಂ, ಪ್ರ‘ಾನಿಗೂ ಪತ್ರ ಬರೆದು ಪರಿಪರಿಯಾಗಿ ಬೇಡಿಕೊಂಡರು ಸ್ಪಂದಿಸದೆ ಇರೋದಕ್ಕೆ ರೋಸಿ ಹೋಗಿರುವ ಬಡಾವಣೆ ನಿವಾಸಿಗಳು ಕೊನೆಯದಾಗಿ ಮತದಾನ ಬಹಿ?್ಕಾರಕ್ಕೆ ಮುಂದಾಗಿದ್ದಾರೆ. ಜನಪ್ರತಿನಿಧಿಗಳ, ಅಧಿಕಾರಿಗಳ ವಿರುದ್ದ ಕೆಂಡ ಕಾರುತ್ತಿರೋ ನಿವಾಸಿಗಳು ಮೂಲಸೌಕರ್ಯ ಕಲ್ಪಿಸೋವರೆಗೂ ಮತದಾನ ಮಾಡೋದಿಲ್ಲ ಅಂತಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

The Daily News Media

The Daily News Media