ಗೌಳಿ ಡಬ್ಬಿಂಗ್, ಸೆಟಲೈಟ್ ರೈಟ್ಸ್ !

ಬೆಂಗಳೂರು: ಅದ್ದೂರಿ ಮೇಕಿಂಗ್ ಹಾಗೂ ಟೈಟಲ್ ಟೀಸರ್ ಮೂಲಕವೇ ಹೆಚ್ಚು ಸುದ್ದಿಯಾಗಿರುವ ಗೌಳಿ ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಸಂದ‘ರ್ದಲ್ಲೇ ಚಿತ್ರದ ಬಿಡುಗಡೆ ದಿನವನ್ನು ಘೋಷಿಸಲಾಗುವುದು ಎಂದು ನಿರ್ಮಾಪಕ ರಘು ಸಿಂಗಂ ಹೇಳಿದ್ದಾರೆ. ಗೌಳಿ ಚಿತ್ರದ ನಾಯಕ ಶ್ರೀ‘ರ ಕಿಟ್ಟಿ. ನಾಯಕಿ ಪಾವನಾಗೌಡ. ಹಿರಿಯ ನಟ ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.
ಶಶಾಂಕ್ ಶೇಷಗಿರಿ ಅವರ ಸಂಗೀತವಿದೆ. ಸಂದೀಪ್ ವಲ್ಲೂರಿ (ಛಾಯಾಗ್ರಹಣ), ಉಮೇಶ್ (ಸಂಕಲನ), ರಘು ಎಂ. (ಕಲಾನಿರ್ದೇಶನ), ವಿಕ್ರಂ, ಅರ್ಜುನ್ ರೈ (ಸಾಹಸ ನಿರ್ದೇಶನ) ಅವರ ಶ್ರಮವಿದೆ.

The Daily News Media

The Daily News Media