ಬೆಂಗಳೂರು ಜಗತ್ತಿನ ಸಿಲಿಕಾನ್ ವ್ಯಾಲಿ

ಬೆಂಗಳೂರು ತಂತ್ರeನ ಸಮಾವೇಶದ ರಜತೋತ್ಸವದಲ್ಲಿ ೩೪ ಸಾ‘ಕ ಕಂಪನಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸನ್ಮಾನ
ದಿ ಡೈಲಿ ನ್ಯೂಸ್ ಬೆಂಗಳೂರು
ವಿeನ ಮತ್ತು ತಂತ್ರeನಗಳ ರಾಜ‘ನಿಯಾಗಿರುವ ಬೆಂಗಳೂರು ಇಡೀ ಜಗತ್ತಿನ ಸಿಲಿಕಾನ್ ವ್ಯಾಲಿಯಾಗಿ ಬೆಳೆಯಬೇಕು. ನಮ್ಮ ಸಾ‘ನೆಯು ಅಮೆರಿಕದ ಸ್ಯಾನ್ನ್ಸಿಸ್ಕೋದ ಸಾ‘ನೆಯನ್ನು ಮೀರಿಸಬೇಕು. ಈ ಸಮಾವೇಶವು ‘ವಿಷ್ಯದ ತಂತ್ರeನದ ಬೆಳವಣಿಗೆಗೆ ಸಂಬಂಽಸಿದಂತೆ ’ಬೆಂಗಳೂರು ಘೋಷಣೆ’ಯೊಂದಿಗೆ (ಬೆಂಗಳೂರು ಡಿಕ್ಲರೇಷನ್) ಹೊರಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಿಸಿದರು.
ರಜತೋತ್ಸವದ ಸಂ‘ಮದಲ್ಲಿರುವ ಬೆಂಗಳೂರು ತಂತ್ರeನ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ ಅವರು,
ಬೆಂಗಳೂರು ಪ್ರತಿ‘, ಅವಕಾಶ ಮತ್ತು ಬೆಳವಣಿಗೆಗಳ ನಗರವಾಗಿದೆ. ತಂತ್ರeನ ಕ್ಷೇತ್ರದಲ್ಲಿ ಕಂಡಿರುವ ಯಶಸ್ಸು ನಿರಂತರವಾಗಿ ಇರುವಂತೆ ಸರಕಾರ ನೋಡಿಕೊಳ್ಳಲಿದೆ. ಇನ್ನೊಂದೆಡೆಯಲ್ಲಿ, ಪ್ರ‘ನಿ ನರೇಂದ್ರ ಮೋದಿಯವರ ನವ‘ರತ ನಿರ್ಮಾಣದ ಗುರಿ ಇದೆ. ಉದ್ಯಮಿಗಳು ಇನ್ನುಮುಂದೆ ಬೆಂಗಳೂರಿನಿಂದ ಆಚೆಗೆ ನೋಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಬೆಂಗಳೂರು ಏನನ್ನು ಚಿಂತಿಸುತ್ತದೋ ಅದು ಇಡೀ ‘ರತವನ್ನೇ ಬದಲಿಸುತ್ತಿದೆ. ನಾಡಪ್ರ‘ ಕೆಂಪೇಗೌಡರು ಕಟ್ಟಿದ ಈ ನಗರವು ಕಳೆದ ಐದು ಶತಮಾನಗಳಿಂದಲೂ ಪುರೋಗಾಮಿಯಾಗಿದೆ. ಈ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶದಿಂದಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ೧೦೮ ಅಡಿಗಳ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಐಐಐಟಿ-ಬಿ ಸಂಸ್ಥಾಪಕ ಪ್ರೊ.ಷಡಗೋಪನ, ಐಟಿ ವಿಷನ್ ಗ್ರೂಪ್ ಅ‘ಕ್ಷ ಕ್ರಿಸ್ ಗೋಪಾಲಕೃಷ್ಣನ್, ನಾಸ್ಕಾಂನ ವಿಶ್ವನಾಥನ್, ಉದ್ಯಮಿಗಳಾದ ಜಿ.ಎಸ್.ಕೃಷ್ಣನ್, ವಿವೇಕ್ ತ್ಯಾಗಿ, ಐಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.

The Daily News Media

The Daily News Media