‘ಭಾಷೆ ಕಲಿಕೆ ಹೆಮ್ಮೆಯ ವಿಷಯ

ದಿ ಡೈಲಿ ನ್ಯೂಸ್ ಬೇಲೂರು
ಕನ್ನಡ ‘ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯವಾಗಬೇಕು, ಕನ್ನಡ ‘ಭಾಷೆ ಮಾತನಾಡಲು ಕೀಳರಿಮೆ ಬೇಡ ಎಂದು ಶಾಸಕ ಕೆ.ಎಸ್.ಲಿಂಗೇಶ್ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂ‘ಗದ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿಯಿಂದ ಏರ್ಪಡಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ‘ಭಾಷೆಗೆ ಪ್ರಥಮ ಶಿಲಾಶಾಸನ ನೀಡಿದ ತಾಲೂಕಿನ ಹಲ್ಮಿಡಿ ಗ್ರಾಮದ ಸಮಗ್ರ ಅಭಿವೃದ್ದಿಗೊಳಿಸಲಾಗುವುದು. ದಾಸಸಾಹಿತ್ಯಕ್ಕೂ ಬೇಲೂರಿಗೂ ಅವಿನಾ‘ವ ಸಂಬಂ‘ವಿದೆ ಎಂದರು.
ತಹಸೀಲ್ದಾರ್ ರಮೇಶ್ ‘ಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ‘ಭಾಷೆಯ ಪ್ರಾಚೀನತೆ ಬಗ್ಗೆ ತಿಳಿಸುವ ಹಲ್ಮಿಡಿ ಶಾಸನ ನಮ್ಮ ತಾಲೂಕಿನಲ್ಲಿ ಇರುವುದು ಹೆಮ್ಮೆಯ ವಿಷಯ ಎಂದರು.
ಉಪನ್ಯಾಸಕ ದಯಾನಂದ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾವಿಕಾಸ್ ಶಾಲೆಯ ೪ನೇ ತರಗತಿ ವಿದ್ಯಾರ್ಥಿನಿ ಇಕ್ಬಾಲ್ ಪುತ್ರಿ ಆಯಿಷಾರಿಜಾ ಕನ್ನಡ ‘ವುಟದ ಕೆಂಪು ಹಳದಿ ಬಣ್ಣದೊಂದಿಗೆ ವೇಷ ‘ರಿಸಿದ್ದು ಎಲ್ಲರ ಗಮನ ಸೆಳೆಯಿತು.
ಪುರಸ‘ ಅ‘ಕ್ಷ ಸಿ.ಎನ್.ದಾನಿ, ಉಪಾ‘ಕ್ಷೆ ಉಪಾ ಸತೀಶ್, ತಾಪ .ಇಒ ಸುನಿತಾ, ಬಿಇಒ ಕೆ.ಪಿ.ನಾರಾಯಣ್, ವೃತ್ತ ನೀರಿಕ್ಷಕ ಶ್ರೀಕಾಂತ್, ಪಿಎಸ್‌ಐ ಶಿವಾನಂದ ಪಾಟೀಲ್, ಕಸಾಪ ಅ‘ಕ್ಷ ಬಿ.ಎಲ್.ರಾಜೇಗೌಡ, ಚಂದ್ರಶೇಖರ್, ಪಾಲಾಕ್ಷಮೂರ್ತಿ, ಜಮಾಲ್ಲುದ್ದೀನ್, ಶ್ರೀನಿವಾಸ್, ಬಸವರಾಜು ಇದ್ದರು.

The Daily News Media

The Daily News Media