ವಿದ್ಯಾಕ್ಷೇತ್ರದಲ್ಲಿ ಅನನ್ಯ ಸೇವೆ

ದಿ ಡೈಲಿ ನ್ಯೂಸ್ ಚನ್ನರಾಯಪಟ್ಟಣ
ವಿದ್ಯಾಕ್ಷೇತ್ರದಲ್ಲಿ ಸುತ್ತೂರು ಮಠ ಮಾಡಿರುವ ಸೇವೆ ಅನನ್ಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾ‘ಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.
ತಾಲೂಕಿನ ಬಾಗೂರು ಹೋಬಳಿ ಕೋಡಿಹಳ್ಳಿ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶಿವದೀಕ್ಷೆ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿ, ಸುತ್ತೂರು ಮಠದ ಪರಂಪರೆಯನ್ನು ಈಗಿನ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನೆಡೆಸುತ್ತಿದ್ದಾರೆ. ಸಾಮಾಜಿಕ ಸಮಾನತೆ ಹರಿಕಾರ ಬಸವಣ್ಣ ಅವರು, ೧೨ನೇ ಶತಮಾನದಲ್ಲಿ ಮಾಡಿದ ಕ್ರಾಂತಿ ವಿಚಾರಗಳು ಇಂದಿಗೂ ಪ್ರಸ್ತುತ ಎಂದರು. ಕಾರ್ಯಕ್ರಮದಲ್ಲಿ ನುಗ್ಗೇಹಳ್ಳಿ ಹಿರೇಮಠದ ಸ್ವಾಮೀಜಿ ಮಾತನಾಡಿ, ಸಮಾಜ ಕಟ್ಟಲು ‘ರ್ಮ ಪರಿಣಾಮಕಾರಿ ಮಾ‘ಮ. ‘ರ್ಮದ ಹಾದಿಯಲ್ಲಿ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾ‘ವಿದೆ ಎಂದರು. ದತ್ತಿಪೀಠದ ಸೋಮಶೇಖರ ಸ್ವಾಮೀಜಿ ಮಾತನಾಡಿ, ಶಿವ ದೀಕ್ಷಾ ಕಾರ್ಯಕ್ರಮವನ್ನು ಪ್ರತಿ ಗ್ರಾಮಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು.
ತಾಲೂಕು ವೀರಶೈವ ಲಿಂಗಾಯತ ಸಮಾಜದ ಅ‘ಕ್ಷ ಎನ್.ಪರಮೇಶ್, ಸುತ್ತೂರು ಮಠದ ಪಂಚಾಕ್ಷರಿ ಮಾತನಾಡಿದರು. ಗೋಡೆಕೆರೆ ಮಠದ ಸಿದ್ದೇಶ್ವರ ಸ್ವಾಮೀಜಿ, ಹೊನ್ನಳ್ಳಿ ಶಾಖಾ ಮಠದ ಕಲ್ಯಾಣ್ ದೇವರು ಸ್ವಾಮೀಜಿ, ಗ್ರಾಪಂ ಅ‘ಕ್ಷೆ ಅನುಸೂಯ, ಶಿಕ್ಷಕ ಪರಮೇಶ್, ‘ವನಹಳ್ಳಿ ಚನ್ನೇಗೌಡ, ಸಿದ್ದರಾಜು, ನವೀನ್ ಕುಮಾರ್, ಸೋಮಶೇಖರಯ್ಯ, ಗಂಗಾ‘ರಯ್ಯ, ರುದ್ರೇಗೌಡ, ಸೋಮಶೇಖರ್, ಶಿವಸ್ವಾಮಿ, ರಮೇಶ್, ಶ್ಯಾಮಪ್ರಸದ್, ಕೆ.ಎಸ್.ನಟರಾಜ್, ಕೆ.ಜಿ.ನಾಗೇಶ್, ಚಿದಾನಂದ್ ಮೂರ್ತಿ, ಜಯಣ್ಣ, ಮುಖಂಡರುಗಳು ‘ಕ್ತಾಽಗಳು ಇತರರು ಉಪಸ್ಥಿತರಿದ್ದರು.

The Daily News Media

The Daily News Media