ಚೆನ್ನಮ್ಮ ಜಯಂತ್ಯುತ್ಸವ

ಹೊಸಪೇಟೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸ‘ ಸಂಯುಕ್ತಾಶ್ರಯದಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಕೊಟ್ಟೂರುಸ್ವಾಮಿ ಮಠದಲ್ಲಿ ಸರಳವಾಗಿ ಆಚರಿಸಲಾಯಿತು. ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮಾತನಾಡಿ, ಕಿತ್ತೂರುರಾಣಿ ಚೆನ್ನಮ್ಮ ಹುಟ್ಟಿದ ನಾಡಿನಲ್ಲಿ ಹುಟ್ಟಿದ ನಾವು ಅದೃಷ್ಟವಂತರು, ನಾವು ಕಿತ್ತೂರು ರಾಣಿ ಚೆನ್ನಮ್ಮನ ತರಹ ನಾವು ಯುದ್ದಮಾಡುವಂತಹ ಸ್ಥಿತಿ ಇಲ್ಲ. ನಾವು ಈಗ ಸ್ವತಂತ್ರರಾಗಿದ್ದು, ನಾವು ಯಾವುದೇ ರಂಗದಲ್ಲಿ ಯಾವುದೇ ಕೆಲಸ ಮಾಡಲಿ ಅತ್ಯಂತ ಶ್ರದ್ಧೆ ಹಾಗೂ ಪ್ರಮಾಣಿಕವಾಗಿ ಮಾಡಿದರೆ, ನಾವು ದೇಶದ ಪ್ರಗತಿಗೆ ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿದರು. ಉಪಸ‘ಪತಿ ಸವದತ್ತಿ ಶಾಸಕ ಆನಂದ ಮಾಮನಿ ಅವರು ವಿಽವಶರಾದ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಕೊಟ್ಟೂರು ಮಠದ ಜಗದ್ಗುರು ಬಸವಲಿಂಗಸ್ವಾಮಿ ಅವರು ಮಾತನಾಡಿದರು. ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಕಿತ್ತೂರು ರಾಣಿ ಚೆನ್ನಮ್ಮ ಸಮಾಜದ ಮುಖಂಡರು, ವೀರಶೈವ ಸಮಾಜದ ಮುಖಂಡರು ಸೇರಿದಂತೆ ಇತರರು ಇದ್ದರು.

 

The Daily News Media

The Daily News Media