ಪಟಾಕಿ ಸಿಡಿಸುವುದೇ ದೀಪಾವಳಿಯಲ್ಲ

ದಿ ಡೈಲಿ ನ್ಯೂಸ್ ದಾವಣಗೆರೆ
ದೀಪಾವಳಿಗೆ ಪಟಾಕಿಗಳನ್ನು ಸಿಡಿಸುವುದೇ ದೀಪಾವಳಿಯಲ್ಲ; ದೀಪವನ್ನು ಹೊತ್ತಿಸಿ ಸಂ‘ಮಿಸುವುದಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ದೀಪಾವಳಿ ಬೆಳಕಿನ ಹಬ್ಬ. ಎಲ್ಲರೂ ಸಂ‘ಮ ಹಾಗೂ ಸಡಗರದಿಂದ ಆಚರಿಸುವ ಹಬ್ಬ. ಪಟಾಕಿಗಳನ್ನು ಸಿಡಿಸಬೇಕು ಎಂದೇನಿಲ್ಲ. ಪಟಾಕಿಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ತಪ್ಪಿದರೆ, ಬದುಕಿನ ಹಬ್ಬ ಬೆಳಕನ್ನೇ ಕಸಿಯಬಹುದು ಎಂದು ಮಂಡಳಿ ಎಚ್ಚರಿಸಿದೆ. ನೆರೆಹೊರೆಯವರಿಗೂ ತೊಂದರೆಯಾಗುತ್ತದೆ. ಗಿಡ-ಮರ, ಪ್ರಾಣಿ-ಪಕ್ಷಿಗಳಿಗೂ ಅಪಾಯವಿದೆ. ಪಟಾಕಿ ಸಿಡಿಸುವಾಗ ಮಕ್ಕಳು ಕಣ್ಣುಗಳನ್ನು ಕಳೆದುಕೊಂಡಿದ್ದಿದೆ. ವಾಯು ಹಾಗೂ ಶಬ್ದ ಮಾಲಿನ್ಯ ಹೆಚ್ಚುತ್ತದೆ. ಪಟಾಕಿ ಸೂಸುವ ವಿಷಗಾಳಿಯ ಸೇವನೆಯಿಂದ ಹಲವು ರೋಗಗಳು ಕಾಡುತ್ತವೆ. ಘನತ್ಯಾಜ್ಯದ ಹೆಚ್ಚಳವೂ ಸ್ವಚ್ಛತೆಗೆ ಸಮಸ್ಯೆಯಾಗುತ್ತದೆ. ಸೋಟಕ-ಪಟಾಕಿಗಳ ಸದ್ದಿನಿಂದ ಒತ್ತಡ, ನಿದ್ರಾಹೀನತೆ, ಕಿವುಡುತನ, ರಕ್ತದೊತ್ತಡ, ಹೃದಯಘಾತ ಇತ್ಯಾದಿ ಅಪಾಯಗಳಿವೆ. ೧೨೫ ಡೆಸಿಬಲ್‌ಗೂ (ಶಬ್ದದ ಪ್ರಮಾಣ) ಮೇಲ್ಪಟ್ಟ ಪಟಾಕಿಗಳ ಸಿಡಿತವನ್ನು ನಿಷೇಽಸಲಾಗಿದೆ. ರಾತ್ರಿ ೧೦ ರಿಂದ ಬೆಳಿಗ್ಗೆ ೬ ಗಂಟೆ ನಡುವೆ ಪಟಾಕಿ ಸಿಡಿಸುವುದನ್ನು ಮತ್ತು ಆಸ್ಪತ್ರೆ, ವೃದ್ಧಾಶ್ರಮಗಳ ಹತ್ತಿರ ಪಟಾಕಿ ಸಿಡಿಸಬಾರದದೆಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

The Daily News Media

The Daily News Media