ಪಟಾಕಿಗೆ ವಿದಾಯ ಹೇಳಿ

ದಿ ಡೈಲಿ ನ್ಯೂಸ್ ವಿಜಯಪುರ
ಪಟಾಕಿಗೆ ವಿದಾಯ ಹೇಳಿ. ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಿ ಎಂದು ಮುಖ್ಯೋಪಾ‘ಯ ಸಿ. ಅಶೋಕ್ ಕುಮಾರ್ ತಿಳಿಸಿದರು.
ಬೀಡಿಗಾನ ಹಳ್ಳಿಯ ಆಕೃತಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ದೀಪಾವಳಿಯ ಪಟಾಕಿ ಸಿಡಿತದಿಂದ ಆಗುವ ದುಷ್ಪರಿಣಾಮ ಬಗ್ಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಪಟಾಕಿಯಿಂದ ಉಸಿರಾಡುವ ಗಾಳಿಗೆ ವಿಷ , ಶಬ್ದದಿಂದ ಕಿವಿಗೆ ಹೃದಯಕ್ಕೆ ಆಘಾತ, ಕಣ್ಣಿಗೆ ದೇಹಕ್ಕೆ ಅಪಾಯವಿದೆ. ಆದ್ದರಿಂದ, ಪಟಾಕಿಗಳಿಗೆ ವಿದಾಯ ಹೇಳಿ ಎಂದು ಅವರು ಮನವಿ ಮಾಡಿದರು.
ಆಡಳಿತ ಮಂಡಳಿಯ ಪ್ರಸನ್ನ ಕುಮಾರ್ ಮಾತನಾಡಿ, ದೀಪಾವಳಿ ಬೆಳಕಿನ ಹಬ್ಬ . ಅದಕ್ಕೇ, ಬೆಳಕೇ ಪ್ರ‘ನವಾಗಿರಲಿ. ಮಲಿನವಾಗಿರುವ ನಮ್ಮ ಪರಿಸರವನ್ನು ಮತ್ತಷ್ಟು ಮಲಿನಗೊಳಿಸದೇ, ಅದನ್ನು ಉಳಿಸಬೇಕಾದದು ನಮ್ಮೆಲ್ಲರ ಕರ್ತವ್ಯ ಎಂದರು. ಪಟಾಕಿಗಳನ್ನ ಸುಡುವುದರಿಂದ ಆಗುವ ಅನಾಹುತಗಳನ್ನು ಬಿಂಬಿಸುವ ಘೋಷವಾಕ್ಯಗಳನ್ನು ಹೊಂದಿದ ಪೋಸ್ಟರ್ ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕರಪತ್ರಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಮಂಜುಳಾದೇವಿ , ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

The Daily News Media

The Daily News Media