ಗಡ್ಡದನಾಯಕನಹಳ್ಳಿ: ಅಂಬಾರಿ ಉತ್ಸವ

ವಿಜಯಪುರ:  ಹೋಬಳಿಯ ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇವಿಯ ದೇವಾಲಯದಲ್ಲಿ ಅಂಬಾರಿ ಉತ್ಸವ ಅಂಗವಾಗಿ ಆನೆಯ ಮೇಲೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಜರುಗಿತು. ಪ್ರ‘ನ ಅರ್ಚಕ ನಾಗರಾಜಪ್ಪ , ‘ರ್ಮಿಕ ಆಚರಣೆಗಳಂತೆ ವಿವಿ‘ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಉತ್ಸವಮೂರ್ತಿಯನ್ನು ಮೂರು ಬಾರಿ ದೇವಾಲಯ ಪ್ರದಕ್ಷಿಣೆ ಮಾಡಿಸಿದ ನಂತರ ಆನೆಯ ಮೇಲೆ ಸಿದ್ಧಗೊಳಿಸಿದ್ದ ಅಂಬಾರಿಗೆ ಕೊಂಡೊಯ್ಯಲಾಯಿತು. ಪಲ್ಲಕ್ಕಿ ಉತ್ಸವ ನಡೆಯಿತು. ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ್ದ ಜನರು ‘ಕ್ತಿಯಿಂದ ನಮಿಸಿ, ದೇವಿಗೆ ಪುಷ್ಪಾರ್ಚನೆ ಮಾಡಿದರು. ಜಂಗಮಕೋಟೆಯ ಪಾಂಡುರಂಗ ಜಾನಪದ ಕಲಾತಂಡದಿಂದ ಕೀಲು ಕುದುರೆ, ವಿವಿ‘ ವೇಷ ‘ಷಣಗಳೊಂದಿಗೆ ನೃತ್ಯ, ಡೊಳ್ಳು ಕುಣಿತ, ವೀರಗಾಸೆ, ವೀರ‘ದ್ರಕುಣಿತ, ಪಟ್ಟದ ಕುಣಿತ, ಚಂಡೇ ವಾದ್ಯಗಳ ವಾದನ, ಕೇರಳದ ಸಾಂಸ್ಕೃತಿಕ ತಂಡದಿಂದ ಮಹಿಷಾಸುರ ಮ‘ನ ನೃತ್ಯ ರೂಪಕಗಳೊಂದಿಗೆ ಅಂಬಾರಿ ಉತ್ಸವ, ಸಾಗಿತು. ತಿಮ್ಮನಹಳ್ಳಿಯವರೆಗೂ ಸಂಚರಿಸಿ, ನಂತರ ಗಡ್ಡದನಾಯಕನಹಳ್ಳಿ ಗ್ರಾಮ ಪ್ರದಕ್ಷಿಣೆ ಮಾಡಿ ದೇವಾಲಯಕ್ಕೆ ವಾಪಸ್ಸು ಕರೆತರಲಾಯಿತು.

The Daily News Media

The Daily News Media