ರಾಹುಲ್ ಪಕ್ಷದ ಅ‘ಕ್ಷರಾಗಬೇಕು

ಕಲಬುರಗಿಯಲ್ಲಿ ರಾಜ್ಯಸ‘ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಮತ
ದಿ ಡೈಲಿ ನ್ಯೂಸ್ ಕಲಬುರಗಿ
ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್‌ಗಾಂಽ ಅವರು ಎಐಸಿಸಿ ಅ‘ಕ್ಷರಾಗಬೇಕು. ಅವರ ಐಡಿಯಾಲಜಿ ಚೆನ್ನಾಗಿದೆ. ಅವರಿಂದ ಪಕ್ಷಕ್ಕೆ ಲಾ‘ವಾಗಲಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ರಾಜ್ಯಸ‘ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು. ಪ್ರ‘ನಿ ಮೋದಿಯವರ ಹುಟ್ಟು ಹಬ್ಬದಂದು ‘ರತಕ್ಕೆ ಚೀತಾ ತಂದಿರುವುದು ಮಹತ್ಸಾ‘ನೆಯಲ್ಲ. ಕೋವಿಡ್ ಸಂದ‘ದಲ್ಲಿ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಇಂದಿಗೂ ಅದೆಷ್ಟೋಜನ ಹಸಿವಿನಂದ ಬಳಲುತ್ತಿದ್ದಾರೆ. ಈ ಚೀತಾ ತಂದರೂ ಲಾ‘ವಿಲ್ಲ. ತರದಿದ್ದರೂ ಯಾವುದೇ ಹಾನಿಯಿಲ್ಲ ಎಂದು ಶುಕ್ರವಾರ ಮಾ‘ಮದವರ ಪ್ರಶ್ನೆಗೆ ಉತ್ತರಿಸಿದರು. ಪಿಎಐ ಎಸ್‌ಡಿಪಿಐ ಹಾಗೂ ಇನ್ನಿತರ ಸಂಘಟನೆಗಳ ಮೇಲೆ ನಡೆದ ಎನ್‌ಐಎಎ ದಾಳಿ ಬಗ್ಗೆ ಮಾತನಾಡಿದ ಅವರು, ಯಾವುದೇ ಸಂಸ್ಥೆ ಮೇಲೆ ಕ್ರಮ ತೆಗೆದುಕೊಳ್ಳುವಾಗ ಸಾ‘ಕ ‘ದಕ ಬಗ್ಗೆ ಚರ್ಚೆ ಮಾಡಿ ದಾಳಿ ಮಾಡಬೇಕು. ದೇಶದಲ್ಲಿ ಹಿಂದು ಸಂಘಟನೆ ಹೆಸರಲ್ಲಿ ಎಷ್ಟು ಕಡೆ ಅನ್ಯಾಯ ಆಗಿಲ್ಲ? ದೇಶದ್ರೋಹಿ ಕೆಲಸ ಯಾರೇ ಮಾಡಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಕಾಂಗ್ರೆಸ್‌ನ ‘ರತ್ ಜೋಡೊ ಯಾತ್ರೆ ಇನ್ನೂ ಕರ್ನಾಟಕಕ್ಕೆ ಕಾಲಿಟ್ಟಿಲ್ಲ. ಪಕ್ಷದ ಎಲ್ಲರೂ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಅ‘ಕ್ಷ ಸ್ಥಾನದ ಆಕಾಂಕ್ಷಿ ನಾನು ಅಲ್ಲ. ಹೀಗಾಗಿ ನಾಮಿನೇಷನ್ ಹಾಕುವ ಪ್ರಸಂಗವೇ ಬರುವುದಿಲ್ಲ ಎಂದರು.

The Daily News Media

The Daily News Media