ಆರೋಗ್ಯ ಕಾಳಜಿ ಅತ್ಯಗತ್ಯ : ದಡ್ಡಿ

ದಿ ಡೈಲಿ ನ್ಯೂಸ್ ಜಮಖಂಡಿ
ಹಗಲಿರುಳು ಶ್ರಮಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತಾಳಬಾರದು. ತಾವು ಆರೋಗ್ಯವಂತರಾಗಿದ್ದರೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸಾ‘ ಎಂದು ‘ರತೀಯ ವೈದ್ಯಕೀಯ ಸಂಸ್ಥೆಯ ತಾಲೂಕಾ ಅ‘ಕ್ಷ ನಾಡೋಜ ಡಾ. ಎಚ್.ಜಿ. ದಡ್ಡಿ ಹೇಳಿದರು. ನಗರದ ಶಾರದಾ ಆಸ್ಪತ್ರೆಯಲ್ಲಿ ಪ್ರ‘ನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೆ ಹಾಗೂ ಅವರ ಕುಟುಂ‘ದ ಸದಸ್ಯರಿಗೆ ಬು‘ವಾರ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ಪ್ರಸ್ತುತ ದಿನಮಾನದಲ್ಲಿ ವೇಗದ ಸುದ್ದಿ ನೀಡುವ ‘ವಂತದಲ್ಲಿ ಪತ್ರಕರ್ತರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಅನೇಕ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುವದು ವಿಪರ್ಯಾಸದ ಸಂಗತಿ. ತಮ್ಮ ವರದಿಗಳ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣಿಕರ್ತರಾಗಿರುವ ಪತ್ರಕರ್ತರು ತಮ್ಮ ಆರೋಗ್ಯದಕಡೆ ಹೆಚ್ಚು ಗಮನಹರಿಸಿ ಆರೋಗ್ಯದ ಜೊತೆಗೆ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ನಿರಂತರ ಸಾಗಬೇಕು ಎಂದರು. ಶಾರದಾ ಆಸ್ಪತ್ರೆಯ ವೈದ್ಯೆ ಹಾಗೂ ಬಿಜೆಪಿ ಜಿಲ್ಲಾ ಉಪಾ‘ಕ್ಷೆ ಡಾ. ವಿಜಯಲಕ್ಷ್ಮೀ ತುಂಗಳ ಮಾತನಾಡಿ, ದೇಶಕಂಡ ಅತ್ಯುತ್ತಮ ಪ್ರ‘ನಿ ನರೇಂದ್ರ ಮೋದಿ ಅವರ ಜನ್ಮದಿನದ ಸೇವಾ ಪಾಕ್ಷಿಕ ಅಭಿಯಾನದ ನಿಮಿತಯ್ತ ನಿತ್ಯ ಸಮಾಜದ ನುರಾರು ಜನರಿಗೆ, ಅಸಹಾಯಕರಿಗೆ, ಶೋಷಿತ ಜನಾಂಗಕ್ಕೆ ಹಾಗೂ ಸಮಾಜದ ಎಲ್ಲ ರಂಗಗಳಿಗೆ ತಮ್ಮ ಸುದ್ದಿಯ ಮೂಲಕ ಸೇವೆ ಸಲ್ಲಿಸುವ ಪತ್ರಕರ್ತರ ಆರೋಗ್ಯವನ್ನು ವಿಚಾರಿಸುವ ಗತ್ಯ ಎಂದರು. ಡಾ. ಆರ್.ಎನ್. ಸೋನವಾಲ್ಕರ, ಡಾ. ವ್ಹಿ.ಎಸ್. ಬಿರಾದಾರ, ಡಾ. ಜೆ.ಎಸ್. ಬಿರಾದಾರ, ಡಾ. ಕೆ.ಆರ್. ಬಣ್ಣದ, ಡಾ. ಮಹೇಶ ಪಾಟೀಲ, ಡಾ. ಗುರುಮಠ, ಡಾ. ವಿನಾಯಕ ಕುಸಬಿ, ಡಾ. ಸಿ.ಎನ್. ರುದ್ರಸ್ವಾಮಿಮಠ, ಡಾ, ಎಮ್.ಬಿ. ಚಿಂಚಖಂಡಿ, ಕಾನಿಪ ಅ‘ಕ್ಷ ಎಮ್.ಎನ್. ನದಾ, ಡಾ. ಪೋಲಿಸ್‌ಪಾಟೀಲ, ಡಾ. ಸಚೀನ ಅವರಾಽ, ಡಾ. ಮಾಳೇಶ ಪೂಜಾರ ಇದ್ದರು.

The Daily News Media

The Daily News Media