ಮೂರು ಗಂಟೆಯೊಳಗೆ ಚಿರತೆೆ ಸೆರೆ

ದಿ ಡೈಲಿ ನ್ಯೂಸ್ ತುರುವೇಕೆರೆ
ತಾಲೂಕಿನ ಹಳ್ಳಿಕಾರ್ ತಳಿ ಾರೆಸ್ಟ್‌ನಲ್ಲಿ ಸಾಕಿರುವ ಹಸುಗಳಿಗಳನ್ನು ತಿನ್ನಲು ರೂಢಿಯಾಗಿದ್ದ ಚಿರತೆಗೆ ಅರಣ್ಯ ಇಲಾಖೆಯವರು ಬೋನಿಟ್ಟ ಮೂರೇ ಗಂಟೆಗಳಲ್ಲಿ ಬೋನಿನಲ್ಲಿ ಬಂಧಿಯಾಗಿದೆ.
ಈ ಕುರಿತು ಹಳ್ಳಿಕಾರ್ ತಳಿ ಸಂವ‘ರ್ನಾ ಕ್ಷೇತ್ರದ ಉಪನಿರ್ದೇಶಕ ಗುರುಮೂರ್ತಿ ಮಾತನಾಡಿ, ಸುಮಾರು ಒಂದೆರಡು ತಿಂಗಳುಗಳ ಹಿಂದೆ ಾರೆಸ್ಟ್‌ ನ ಕೆಲವಡೆ ಕಾಣಿಸುತ್ತಿತ್ತು. ಆಗಸ್ಟ್‌ ತಿಂಗಳಲ್ಲಿ ಒಂದು ಹಸುವನ್ನು ತಿಂದು ಬಿಸಾಡಿತ್ತಲ್ಲದೆ, ಸೆಪ್ಟೆಂಬರ್ 5ರಂದು ಕರುವೊಂದನ್ನು ಎಳೆದೊಯ್ದಿತ್ತು. ಹೀಗಾಗಿ ಅರಣ್ಯ ಇಲಾಖೆಗೆ ವಿಚಾರ ಮುಟ್ಟಿಸಿದಾಗ ಮಂಗಳವಾರ ಸಂಜೆ 5ರ ವೇಳೆಗೆ ಬೋನು ತಂದಿಟ್ಟಿದ್ದರು ರಾತ್ರಿ 8ಕ್ಕೆ ನೋಡಲಾಗಿ ಚಿರತೆ ಬೋನಿನಲ್ಲಿ ಸೆರೆಯಾಗಿತ್ತು ಬೆಳಗ್ಗೆ ಬಂದ ಅರಣ್ಯ ಇಲಾಖಾ ಸಿಬ್ಬಂದಿ ಚಿರತೆಯನ್ನು ಬೋನಿನ ಸಮೇತ ಹೊತ್ತೊಯ್ದರು ಈ ಹಿಂದೆ 2018ರಲ್ಲಿ ಮೂರು ಚಿರತೆಗಳನ್ನು ಸೆರೆಹಿಡಿಯಲಾಗಿತ್ತು ಎಂದರು.
ಬಾಣಸಂದ್ರ ಗ್ರಾಮಸ್ಥ ಕೃಷ್ಣ ಮಾದಿಗ ಮಾತನಾಡಿ, ನಮ್ಮ ಗ್ರಾಮವು ಅರ‘್ಯದ ಅಂಚಿನಲ್ಲೇ ಹೊಂದಿಕೊಂಡಿರುವುದರಿಂದ ಚಿರತೆಯ ಹಾವಳಿ ತಪ್ಪುತ್ತಿಲ್ಲ. ಇನ್ನೂ ಎರಡು ಚಿರತೆಗಳಿದ್ದು, ಅರಣ್ಯ ಇಲಾಖಾ ಸಿಬ್ಬಂದಿ ಅವುಗಳನ್ನೂ ಸೆರೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

The Daily News Media

The Daily News Media