500 ಕೋಟಿ ರೂ. ಅವ್ಯವಹಾರ: ಸಿಬಿಐ ತನಿಖೆಗೆ ಒತ್ತಾಯ

ದಿ ಡೈಲಿ ನ್ಯೂಸ್ ಮಂಡ್ಯ: ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಆ‘ುನೀಕರಣ ಕಾಮಗಾರಿಯಲ್ಲಿ 500 ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕೆಂದು ರೈತ ಸಂಘದ ಮಾಜಿ ಅ‘್ಯಕ್ಷ ಕೆ.ಆರ್.ಜಯರಾಮ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಎಡದಂಡೆ ನಾಲೆಯ ಆ‘ುನೀಕರಣ ಕಾಮಗಾರಿ 817.73 ಕೋಟಿ ಮತ್ತು ಶೇ. 8 ಹೆಚ್ಚು ದರಗಳ ಪ್ರಕಾರ 883.15 ಕೋಟಿ ಮೊತ್ತಕ್ಕೆ ವಿಜಯಪುರ ಜಿಲ್ಲೆಯ ಗುತ್ತಿಗೆದಾರ ಎಂ.ವೈ. ಕಟ್ಟಿಮನಿ ಅವರಿಗೆ ವಹಿಸಲಾಗಿದ್ದು, ಕಳಪೆ ಕಾಮಗಾರಿ ಮಾಡಿರುವುದಲ್ಲದೆ, ಶೇ.80 ‘್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ಪ್ರ‘ಾನ ಮಂತ್ರಿ, ಮುಖ್ಯಮಂತ್ರಿ, ಲೋಕಾಯುಕ್ತ, ನೀರಾವರಿ ಸಚಿವ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಬಸವರಾಜ ಬೊವ್ಮಾಯಿಯವರು ಗುತ್ತಿಗೆದಾರರ ಸಂಘದ ಅ‘್ಯಕ್ಷ ಕೆಂಪಣ್ಣನವರಿಗೆ ಶೇ.40 ‘್ರಷ್ಟಾಚಾರದ ಬಗ್ಗೆ ಮಾಹಿತಿ ಕೊಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ನಾವು ಹೇಮಾವತಿ ಎಡದಂಡೆ ನಾಲೆಯಲ್ಲಿ ಆ‘ುನೀಕರಣ ಕಾಮಗಾರಿಯಲ್ಲಿ ನಡೆದಿರುವ ಸುಮಾರು 500 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರದ ಬಗ್ಗೆ ದಾಖಲೆ ನೀಡಿದರೂ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದರು.
ಇನ್ನು ಕಾಮಗಾರಿ ಮುಗಿದಿಲ್ಲ, ಆದರೂ ಗುತ್ತಿಗೆದಾರ ಎಂ.ವೈ. ಕಟ್ಟಿಮನಿಯವರಿಗೆ ಸುಮಾರು 1000 ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ. ಎಂಬಿ ಬುಕ್ ಮಾಹಿತಿ ನೀಡಿಲ್ಲದಿದ್ದರೂ ಕಾಮಗಾರಿ ಪೂರ್ಣವಾಗಿದೆ ಎಂದು ಹೇಳಿ ಎಲ್ಲಾ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದರು.
ರೈತನಾಯಕ ಮ‘ುಚಂದನ್ ಮಾತನಾಡಿ, ಕಾಮಗಾರಿಗೆ ಸುಮಾರು 40 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಗ್ರಾವೆಲ್ ಮಣ್ಣು ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಹೇಳಿರುವ ಜಾಗದಲ್ಲಿ ಒಂದು ಹಿಡಿ ಗ್ರಾವೆಲ್ ಮಣ್ಣನ್ನು ತೆಗೆದಿರುವುದಿಲ್ಲ. ಇನ್ನು ಗ್ರಾವೆಲ್ ಮಣ್ಣು ತೆಗೆದಿದ್ದು ಎಂದು ಹೇಳುವ ಚೌಡಹಳ್ಳಿ ಗ್ರಾಮ ಕೆ.ಆರ್. ಪೇಟೆ ತಾಲೂಕಿನಲ್ಲಿ ಇಲ್ಲವೇ ಇಲ್ಲ. ಗ್ರಾವೆಲ್ ಮಣ್ಣಿಗೆ 250 ಕೋಟಿ ರೂ.ಹಣ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಎಲ್ಲೂ ಕೂಡ ಗ್ರಾವೆಲ್ ಮಣ್ಣು ಉಪಯೋಗಿಸಿಲ್ಲ. ಇದೊಂದರಲ್ಲೇ 250 ಕೋಟಿ ರೂ.‘್ರಷ್ಟರ ಪಾಲಾಗಿದೆ ಎಂದು ಅಸಮಾ‘ಾನ ವ್ಯಕ್ತಪಡಿಸಿದರು.
ಸಚಿವ ನಾರಾಯಣಗೌಡ ಶಾಮೀಲು: ಹೇಮಾವತಿ ಎಡದಂಡೆ ನಾಲೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ಕೆ.ಆರ್. ಪೇಟೆಯಲ್ಲಿ ಅಹೋರಾತ್ರಿ ಆರು ದಿನ ‘ರಣಿ ನಡೆದ ಸಂದ‘ರ್ದಲ್ಲಿ ಸಚಿವ ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವತಿ, ನೀರಾವರಿ ಇಲಾಖೆ ಅಧಿಕಾರಿಗಳು ‘ೇಟಿ ನೀಡಿ ಇನ್ನೊಂದು ವಾರದಲ್ಲಿ ತನಿಖೆಗೆ ಆದೇಶಿಸುವುದಾಗಿ ಹೇಳಿ ಹೋದರು. ಇನ್ನು ಯಾವುದೇ ತನಿಖೆ ಆರಂ‘ಗೊಂಡಿಲ್ಲ. ಜಿಲ್ಲಾಧಿಕಾರಿಯವರು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದರು. ನಂತರ ಮೂವರು ನಿವೃತ್ತ ಮುಖ್ಯ ಎಂಜಿನಿಯರ್‌ಗಳ ಸಮಿತಿ ಮಾಡಿದರು. ಈ ಸಮಿತಿಯಿಂದ ಸತ್ಯಾಂಶ ಹೊರತರುವ ಬಗ್ಗೆ ವಿಶ್ವಾಸವಿಲ್ಲ. ಸಚಿವ ನಾರಾಯಣಗೌಡ ಸೇರಿದಂತೆ ಬಹುತೇಕ ಶಾಸಕರು, ಮಂತ್ರಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಎಂಜಿನಿಯರ್‌ಗಳು, ಗುತ್ತಿಗೆದಾರರು ಕೂಡ ಇದರಲ್ಲಿ ‘ಾಗಿಯಾಗಿದ್ದಾರೆ. ಈ ಬಗ್ಗೆ 2019ರಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ಪ್ರ‘ಾನಮಂತ್ರಿಗೆ ದೂರು ನೀಡಿದ್ದರೂ, ಮತ್ತೊಂದು ದೂರು ನೀಡಲಾಗುವುದು ಎಂದು ಕೆ.ಆರ್.ಜಯರಾಮ್ ತಿಳಿಸಿದರು.ರೈತ ನಾಯಕ ಪ್ರಸನ್ನ ಗೌಡ, ರೈತ ಸಂಘದ ಜಿಲ್ಲಾ ಅ‘್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ರಾಜೇಗೌಡ, ನಾಗೇಗೌಡ, ಶ್ರೀಕಾಂತ್, ಪಣಕನಹಳ್ಳಿ ‘ನಂಜಯ ಉಪಸ್ಥಿತರಿದ್ದರು.

The Daily News Media

The Daily News Media