ರೈತರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ದಿ ಡೈಲಿ ನ್ಯೂಸ್ ವಿಜಯಪುರ
ರೈತರು ಎದುರಿಸುತ್ತಿರುವ ವಿವಿ‘ ತೊಂದರೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಽಕಾರಿಗಳು ಜಿಲ್ಲಾಽಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ, ೨೦೨೨ ನೇ ವರ್ಷದ ಮಳೆಗಾಲ ಈಗಾಗಲೇ ಆರಂ‘ವಾಗಿ ಒಂದು ತಿಂಗಳಾದರೂ ಕೂಡಾ ಮಂಗಾರು ಮಳೆ ಆಗಿಲ್ಲವಾದ್ದರಿಂದ, ಜೂನ್ ತಿಂಗಳಿನಲ್ಲಿ ರೈತರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ತೊಗರಿ ಬೆಳೆ ಬೆಳೆಯಲು ಬೀಜಗಳನ್ನು ಖರೀದಿ ಮಾಡಿದ್ದು ಯಾವುದೇ ಪ್ರಯೋಜನೆಯಾಗಿಲ್ಲ, ಪ್ರಕೃತಿ ವಿಕೋಪದಿಂದ ಈಗ ಅಪಾರ ಮಳೆಯಾಗುತ್ತಿದ್ದು ರೈತರಿಗೆ ಈಗ ಯಾವ ಬೆಳೆ ಬೆಳೆಯಬೇಕೆಂದು ರೈತರಿಗೆ ತೋಚುತ್ತಿಲ್ಲ ಎಂದರು.
ರೈತರಿಗೆ ವಹಿವಾಟು ದಾರಿಗಳ ಸಮಸ್ಯೆಯಾಗಿದ್ದು ಹಲವಾರು ಬಾರಿ ಮನವಿ ಸಲ್ಲಿಸದಿರೂ ಕೂಡಾ ಸಂಬಂ‘ಪಟ್ಟ ಅಽಖಾರಿಗಳಿಂದ ಯಾವುದೇ ಪ್ರಯೋಜನೆಗಳು ಆಗಿಲ್ಲ ಆದ್ದರಿಂದ ತಾವುಗಳು ಈ ಕುರಿತು ಗಮನಹರಿಸಿ ಬಗೆಹರಿಸಿಕೊಡಬೇಕು ಎಂದು ಹೇಳಿದರು.
ಈಗಾಗಲೇ ಬಬಲೇಶ್ವರ ತಾಲೂಕು ಘೋಷಣೆಯಾಗಿದ್ದರೂ ಕೂಡಾ ಸರ್ಕಾರದ ಕೆಲವು ಕಛೇರಿಗಳಾದ ಸಿಪಿಐ, ಬಿಇಓ, ಎಸಿ ಕಚೇರಿ, ಉಪ ನೊಂದಣಿ ಕಚೇರಿ ಮೊದಲಾದವುಗಳು ಮರೀಚಿಕೆಯಾಗಿಯೇ ಉಳಿದಿವೆ, ಬಬಲೇಶ್ವರ ವ್ಯಾಪ್ತಿಯಲ್ಲಿ ಹೊಸ ಕಾಲುವೆಗಳ ನಿರ್ಮಾಣಕ್ಕಾಗಿ ಸರ್ಕಾರ ವಶಪಡಿಸಿಕೊಂಡ ಒತ್ತುವರಿ ಜಮೀನಿನ ಯಾವುದೇ ಸರಿಯಾದ ಪರಿಹಾರದ ಹಣ ಬಂದಿಲ್ಲ, ಕೆನಾಲ್‌ಗಳ ಬದಿಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ಜನರಿಗೆ ದಾರಿಗಳ ಸಮಸ್ಯೆಗಳಾಗುತ್ತಿವೆ ಇದನ್ನು ತಾವು ಸರಿಪಡಿಸಬೇಕು ಎಂದು ರೈತರು ಒತ್ತಾಯಿಸಿದರು.
ಬಸವರಾಜ ಜಂಗಮಶೆಟ್ಟಿ , ನಂದುಗೌಡ ಬಿರಾದಾರ, ಸದಾಶಿವ ಬರಟಗಿ, ಗುರು ಕೋಟ್ಯಾಳ, ಸಂಗಪ್ಪ ಕಾಗಿ, ಮಲ್ಲು ಕೊಕಟನೂರ, ಅರ್ಜುನ ಹಾವಗೊಂಡ, ಗುರು ತಳವಾರ, ಸಿದ್ದಪ್ಪ ನಾಟೀಕಾರ, ಗುರು ಸಾನಿಂಗೆಗೋಳ, ಬಸು ಉಪಾರ, ಶಿವಪ್ಪ ಜಂಗಮಶೆಟ್ಟಿ, ಮುನ್ನಾಗಿಬಿ ಗೋಠೆ ಉಪಸ್ಥಿತರಿದ್ದರು.

The Daily News Media

The Daily News Media