ಜನಸಂಖ್ಯೆ ನಿಯಂತ್ರಣ ಅಗತ್ಯ

ದಿ ಡೈಲಿ ನ್ಯೂಸ್ ಇಂಡಿ
ಅನಕ್ಷರತೆ, ಮೂಢ ನಂಬಿಕೆಗಳಿರುವ ಕುಟುಂಬಗಳಲ್ಲಿ ಜನಸಂಖ್ಯೆ ಅಽಕವಾಗಿದೆ. ಜನಸಂಖ್ಯಾ ಸ್ಥಿರತೆಯಿಂದ ದೇಶದ ಪ್ರಗತಿ ಸಾ‘ವಾಗುತ್ತದೆ. ಈ ನಿಟ್ಟಿನಲ್ಲಿ ಜನಸಂಖ್ಯೆ ಸ್ಥಿರ ಸಾಽಸಲು ಕ್ರಮ ಕೈಗೊಳ್ಳಬೇಕು. ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಽಕಾರಿ ಸುನಂದಾ ಅಂಬಲಗಿ ಹೇಳಿದರು.
ಗುರುವಾರ ತಾಲೂಕಿನ ಹಲಸಂಗಿ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್‍ಯಕ್ರಮದಲ್ಲಿ ಮಾತನಾಡಿ, ಮಿತ ಸಂಸಾರ-ಹಿತ ಸಂಸಾರ, ಹೆಣ್ಣಿರಲಿ-ಗಂಡಿರಲಿ ಮಗು ಒಂದೇ ಇರಲಿ, ಯೋಜಿತ ಪರಿವಾರ ಸುಖ ಅಪಾರ, ಸಂಪೂರ್ಣ ಜವಾಬ್ದಾರಿ ಕುಟುಂಬದ ಸದಸ್ಯನ ಮೇಲಿರುತ್ತದೆ. ಆದಕಾರಣ ಚಿಕ್ಕ ಕುಟುಂಬ ಇದ್ದರೆ ಅಭಿವೃದ್ಧಿವಾಗುತ್ತದೆ. ಪ್ರಕೃತಿಯ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಜನಸಂಖ್ಯೆ ನಿಯಂತ್ರಿಸುದೊಂದೇ ಏಕ ಮಾತ್ರ ಮಾರ್ಗವಾಗಿದೆ. ಜನಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಂತಾನ ನಿಯಂತ್ರಣಕ್ಕೆ ಮಾತ್ರೆಗಳು ಹಾಗೂ ಚುಚ್ಚುಮದ್ದುಗಳು ಬಂದಿವೆ. ಅವುಗಳ ಬಗ್ಗೆ ಅರಿತುಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಎಲ್ಲ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂತಾನಶಕ್ತಿ ನಿಯಂತ್ರಣ ಶಸಚಿಕಿತ್ಸೆ ಶಿಬಿರಗಳು ನಿರಂತರವಾಗಿ ನಡೆಯುತ್ತವೆ. ಸಾರ್ವಜನಿಕರು ಇದರ ಲಾ‘ ಪಡೆದುಕೊಳ್ಳಬೇಕು. ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಲ‘ವಿರುವ ಛಾಯಾ ಮಾತ್ರೆ, ಕಾಂಡೋಮ್ಸ್, ಮಾಲಾ-ಎನ್ ಮಾತ್ರೆಗಳನ್ನು ಲಾನುಬವಿಗಳ ಮನೆ ಬಾಗಿಲವರೆಗೆ ತಲುಪಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದ‘ದಲ್ಲಿ ‘ರ್ಮಸ್ಥಳದ ಸೇವಾ ಸಂಘದ ಜ್ಞಾನ ವಿಕಾಸ ಸಮನ್ವಯ ಅಽಕಾರಿ ಜಯಶ್ರೀ ಎಸ್.ಎಂ, ಅಂಜನಾ ಹಿರೇಮನಿ, ‘ರ್ಮಸ್ಥಳದ ಸೇವಾ ಸಂಘದ ಪ್ರತಿನಿಽಗಳು ಹಾಗೂ ಗ್ರಾಮದ ಮಹಿಳೆಯರು ಇದ್ದರು.

The Daily News Media

The Daily News Media